ಹೊನ್ನಾಳಿ: ಮಾ- 25 ದಾವಣಗೆರೆ ಜಿಲ್ಲೆ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಧರ್ಮದರ್ಶಿ ಹಾಗೂ ದಾವಣಗೆರೆ ಹರಿಹರ ಅರ್ಬನ್ ಕೋ ಅಪ್ ಬ್ಯಾಂಕಿನ ನಿರ್ದೇಶಕರಾದ ಜ್ಯೋತಿ ಪ್ರಕಾಶ್ ರವರ ತಾಯಿ ಶ್ರೀಮತಿ ವಿಶಾಲಾಕ್ಷಮ್ಮ (83) ದಿ// ಮುರುಗೇಶಪ್ಪ ಕುಂಕೊದ್ ಇವರು ಬೆಳಗ್ಗೆ 9.45 ಸಮಯಕ್ಕೆ ಸರಿಯಾಗಿ ಅವರ ಬೆಂಗಳೂರ್ ನಿವಾಸದಲ್ಲಿ ನಿಧನರಾದರು. ಮೃತರಿಗೆ ಮೂರು ಜನ ಹೆಣ್ಣು ಮಕ್ಕಳು ಎರಡು ಜನ ಗಂಡು ಮಕ್ಕಳು ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ದರ್ಶನವನ್ನು ದಾವಣಗೆರೆ ವಿದ್ಯಾನಗರದ ಕೊನೆ ಬಸ್ ನಿಲ್ದಾಣದ ಬಳಿ ಇರುವ ಶ್ರೀಮತಿ ನಂದಿನಿ ಮಹೇಶ್ ಪಟೇಲ್ ಇವರ ನಿವಾಸದ ಅವರಣದಲ್ಲಿ ಇಂದು ಸಂಜೆ 5:00ಗಂಟೆಗೆ ಸರಿಯಾಗಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ತದಾದ ನಂತರ ಮಾರನೆಯ ದಿವಸ 26-3-2023 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಹೊನ್ನಾಳಿ ತಾಲೂಕಿನ ತಕ್ಕನಹಳ್ಳಿ ಗ್ರಾಮದಲ್ಲಿರುವ ಸ್ವಂತ ಜಮೀನಿನಲ್ಲಿ ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಮೃತರ ಅಂತ್ಯ ಸಂಸ್ಕಾರವನ್ನು ನಡೆಸಲಾಗುವುದು ಎಂದು ಹೊನ್ನಾಳಿ ಕೊಂಕೋದ್ ವಂಶಸ್ಥರು ಪ್ರಕಟಣೆಯಲ್ಲಿ ತಿಳಿಸಿದರು.