ನ್ಯಾಮತಿ: ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಇಂದು ಯುಗಾದಿ ಹಬ್ಬದ ಎಂಟನೇ ದಿನದ ಅಂಗವಾಗಿ ವರ್ಷದ ಮೊದಲ ಬೇಸಾಯವನ್ನು ಶ್ರೀದೇವರ ಜಮೀನಿನಲ್ಲಿ ಊರಿನ ಗ್ರಾಮದ ರೈತ ಬಾಂಧವರು ಭೂತಾಯಿಗೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭಿಸಿದರು.
ಕೃಷಿಪರ ರೈತರಾದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪರಮೇಶಣ್ಣನವರು ಮೊದಲನೆಯ ಕೃಷಿ ಚಟುವಟಿಕೆಯ ಬೇಸಾಯವನ್ನ ಪ್ರಾರಂಭಿಸಿ ನಂತರ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಸಹ ಹೊಸ ವರ್ಷದ ಯುಗಾದಿ ಹಬ್ಬದ ಅಂಗವಾಗಿ ಮಾರನೆಯ ದಿವಸ ಆಂಜನೇಯ ಸ್ವಾಮಿ ದೇವರ ಮೂರ್ತಿ ಹೊರಡಿಸಿಕೊಂಡು ಬಸವೇಶ್ವರ ಸ್ವಾಮಿಯ ಸಮ್ಮುಖದಲ್ಲಿ ಮೊದಲನೆಯ ಬೇಸಾಯದ ಉಳುಮೆಯನ್ನು ಯಾವ ರೈತ ಮಾಡಬೇಕು ಎಂದು ಆಂಜನೇಯ ಸ್ವಾಮಿ ಅಪ್ಪಣೆಯ ಮೇರೆಗೆ ರೈತನನ್ನು ಗುರುತಿಸುವ ಕಾರ್ಯ ನಡೆಯುತ್ತದೆ. ಗುರುತಿಸಿದ ತದಾದ ನಂತರ ಯುಗಾದಿ ಹಬ್ಬವಾಗಿ ಎಂಟನೇ ದಿವಸಕ್ಕೆ ಮೊದಲನೆಯ ಬೇಸಾಯ ಮಾಡುವ ರೈತರಾದ ಸಣ್ಣ ತಿಮ್ಮೊಳ ತೋಟಪ್ಪನವರ ಮಗ ಗಿರೀಶ ಎಂಬುವ ರೈತ ಆಂಜನೇಯ ಸ್ವಾಮಿಯ ದೇವಸ್ಥಾನದ ದೇವರ ಜಮೀನಿನಲ್ಲಿ ಭೂಮಿ ತಾಯಿಗೆ ಪೂಜಾ ಕೈಂಕರ್ಯದೊಂದಿಗೆ ನೇಗಿಲು ಮತ್ತು ಜೋಡಿ ಎತ್ತುಗಳಿಗೆ ಪೂಜಿಸಿ, ಮೊದಲನೆಯ ಕೃಷಿ ಚಟುವಟಿಕೆ ಪ್ರಾರಂಭಿಸಿದ ನಂತರ ಊರಿನ ಪ್ರತಿಯೊಬ್ಬ ರೈತ ಕುಟುಂಬದವರು ಸುಮಾರು 150ಕ್ಕೂ ಹೆಚ್ಚು ಜೋಡೆತ್ತುಗಳ ಶೃಂಗರಿಸಿಕೊಂಡು ಹೆಗಲ ಮೇಲೆ ನೇಗಿಲನ್ನು ಹೊತ್ತುಕೊಂಡು ಬಂದು ಭೂಮತಾಯಿ ಮತ್ತು ನೇಗಿಲಗೆ ಪೂಜೆಯನ್ನು ಮಾಡಿ ಈ ವರ್ಷವೂ ಮಳೆ ಬೆಳೆ ಚೆನ್ನಾಗಿ ಆಗಿ ಭೂಮಿತಾಯಿಯಲ್ಲಿ ನಾವು ಬಿತ್ತಿದಂತಹ ಬೀಜವೂ ಮೊಳಕೆಯಾಗಿ ಸಮೃದ್ಧಿಯಾಗಿ ಬೆಳೆದು ಉತ್ತಮ ಫಸಲು ಬಂದು ರೈತನ ಬದುಕು ಅಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪುನಃ ತಮ್ಮ ತಮ್ಮ ಮನೆಗೆ ತೆರಳುತ್ತಾರೆಎಂದು ಗ್ರಾಮದ ಶಿವ ಬ್ಯಾಂಕಿನ ನಿರ್ದೇಶಕ ಬಸವರಾಜಪ್ಪನವರು ತಿಳಿಸಿದರು. ಊರಿನ ಪ್ರತಿಯೊಂದು ರೈತ ಬಾಂಧವರು ಉಪಸ್ಥಿತಿಯಲ್ಲಿ ಇದ್ದರು.

Leave a Reply

Your email address will not be published. Required fields are marked *

You missed