ದಾವಣಗೆರೆ; ಮಾ.29 : ಕರ್ನಾಟಕ
ಸಹಕಾರ ಸಂಘಗಳ ಕಾಯ್ದೆನ್ವಯ, ಈ ಕೆಳಗಿನ
ಸಹಕಾರ ಸಂಘಗಳು ಸಮಾಪನೆಗೊಂಡಿದ್ದು, ಈ
ಸಹಕಾರ ಸಂಘಗಳಿಗೆ ಸಮಾಪನಾಧಿಕಾರಿಯಾಗಿ ಸಹಕಾರ
ಅಭಿವೃದ್ದಿ ಅಧಿಕಾರಿ ಚನ್ನಗಿರಿ ಇವರು
ನೇಮಕಗೊಂಡಿರುತ್ತಾರೆ.
ಈ ಸಹಕಾರ ಸಂಘಗಳಿಗೆ ಸಂಬಂಧಪಟ್ಟವರು ಯಾರೇ
ಇದಲ್ಲಿ, ವಿಜಯ ವಿ. ಸಹಕಾರ ಅಭಿವೃದ್ದಿ ಅಧಿಕಾರಿ, ಸಹಕಾರ
ಅಭಿವೃದ್ದಿ ಅಧಿಕಾರಿ ಕಾರ್ಯಾಲಯ, ಪಿಕಾರ್ಡ ಬ್ಯಾಂಕ್ ನೂತನ
ಕಟ್ಟಡ, ಮೊದಲನೇ ಮಹಡಿ, ಕಗತೂರು ರಸ್ತೆ, ಚನ್ನಗಿರಿ
ಇಲ್ಲಿಗೆ ಭೇಟಿ ನೀಡಬಹುದು. ಈ ಪತ್ರಿಕಾ ಪ್ರಕಟಣೆ
ಹೊರಡಿಸಿದ 15 ದಿನಗಳೊಳಗಾಗಿ ಸಂಬಂಧಪಟ್ಟವರು
ಬರದೇ ಹೋದಲ್ಲಿ ಸಹಕಾರ ಸಂಘಗಳ ನೊಂದಣಿ
ರದ್ದತಿ ಮಾಡಲಾಗುವುದು. ಹಾಗೂ ಮುಂದೆ ಬರುವ
ಯಾವುದೇ ಹೊಣೆಗಾರಿಕೆಗಳಿಗೆ ಸಮಾಪನಾಧಿಕಾರಿಗಳು
ಹೊಣಿಗಾರರಾಗಿರುವುದಿಲ್ಲವೆಂದು ತಿಳಿಸಿದೆ.
ಚನ್ನಗಿರಿ ತಾಲ್ಲೂಕಿನ ಎಕ್ಕೆಗೊಂದಿ ಹಾಲು ಉತ್ಪಾದಕರ
ಸಹಕಾರ ಸಂಘ ನಿ,. ಮುಗಳಿಹಳ್ಳಿ ಹಾಲು ಉತ್ಪಾದಕರ
ಮಹಿಳಾ ಸಹಕಾರ ಸಂಘ ನಿಯಮಿತ, ಹಾಲು ಉತ್ಪಾದಕರ
ಮಹಿಳಾ ಸಹಕಾರ ಸಂಘ ದೊಡ್ಡಘಟ್ಟ, ದೊಡ್ಡೇರಿಕಟ್ಟೆ
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ. ಹಾಲು
ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ. ಕಾಕನೂರು
ಪ್ರಗತಿ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ,
ಕೆರೆಬಿಳಚಿ.
ಹೆಚ್ಚಿನ ಮಾಹಿತಿಗಾಗಿ ಸಹಕಾರ ಅಭಿವೃದ್ದಿ ಅಧಿಕಾರಿ
ಕಾರ್ಯಾಲಯ ಪಿಕಾರ್ಡ ಬ್ಯಾಂಕ್ ನೂತನ ಕಟ್ಟಡ
ಮೊದಲನೇ ಮಹಡಿ ಕಗತೂರು ರಸ್ತೆ, ಚನ್ನಗಿರಿ ಇಲ್ಲಿಗೆ
ಸಂಪರ್ಕಿಸಬಹುದು ಎಂದು ಸಹಕಾರ ಅಭಿವೃದ್ದಿ
ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.