ನ್ಯಾಮತಿ: ತಾಲೂಕ್ ಆಫೀಸ್ ಆವರಣದಲ್ಲಿ ಇಂದು ದಾವಣಗೆರೆ ಆಹಾರ ಜಂಟಿ ನಿರ್ದೇಶಕರ ಆದೇಶದ ಹಿನ್ನೆಲೆಯಲ್ಲಿ ನ್ಯಾಮತಿ ತಾಲೂಕು ಮಟ್ಟದ ನ್ಯಾಯಬೆಲೆ ಅಂಗಡಿಯ ಮಾಲೀಕರಿಗೆ ತಾಲೂಕು ಆಹಾರ ಇಲಾಖೆ ವತಿಯಿಂದ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಇಕೆ ವೈ ಸಿ ಮಾಡಿಸದೇ ಇರುವ ಸುಮಾರು 4200 ಅರ್ಜಿ ಬಾಕಿ ಇದ್ದು, ಅನ್ನ ಅಂತೋದಯ ,ಬಿಪಿಎಲ್ ಕಾರ್ಡದಾರ ಫಲಾನುಭವಿಗಳು ಅತ್ತಿರ ಇರುವ ನಾಯಿಬೆಲೆ ಅಂಗಡಿಗಳಿಗೆ ತೆರಳಿ, ಪ್ರತಿದಿನ ಬೆಳಗೆ 7ರಿಂದ ರಾತ್ರಿ 8ಗಂಟೆವರೆಗೆ ಆಧಾರ್ ಕಾರ್ಡ್ ಜೆರಾಕ್ಸ ಮತ್ತು ಗ್ಯಾಸ್ ಪಾಸ್ ಬುಕ್ ಜೆರಾಕ್ಸ ಪ್ರತಿಯನ್ನು ನ್ಯಾಯಬೆಲೆ ಅಂಗಡಿಗಳಿಗೆ ತೆಗೆದುಕೊಂಡು ಹೋಗಿ ಅಪ್ಡೇಟ ಮಾಡಿಸಿಕೊಳ್ಳಬಹುದು ಎಂದು ಸಾರ್ವಜನಿಕರಿಗೆ ತಿಳಿಯಪಡಿಸುವಂತೆ ಪ್ರಗತಿ ಸಾಧಿಸುವ ಬಗ್ಗೆ ಮಾಹಿತಿಯನ್ನು ಆಹಾರ ಇಲಾಖೆ ಅಧಿಕಾರಿಗಳಿಂದ ಸಭೆಯಲ್ಲಿ ನೀಡಲಾಯಿತು. ಇದರ ಜೊತೆಗೆ ಐಪಿಪಿಬಿ ಕೇಂದ್ರ ಸರ್ಕಾರದ ಯೋಜನೆ ಅನುಷ್ಠಾನಗೊಳಿಸಲು ಮಾಹಿತಿ ಹಾಗೂ ತರಬೇತಿಯನ್ನು ಸಹ ನೀಡಲಾಯಿತು.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕರಾದ ಆರ್ ವೇಣುಗೋಪಾಲ್ ,ನ್ಯಾಯಬೆಲೆ ಅಂಗಡಿಯ ಮಾಲೀಕರ ಅಧ್ಯಕ್ಷರಾದ ಕುಬೇರಪ್ಪ ,ಕಾರ್ಯದರ್ಶಿ ಚೇತನ್, ಖಜಾಂಚಿ ಗಣೇಶ್ ಹಾಗೂ ತಾಲೂಕಿನ ಮಟ್ಟದ ನ್ಯಾಯಬೆಲೆ ಅಂಗಡಿಯ ಮಾಲೀಕರು ಸಹ ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *