ನ್ಯಾಮತಿ ತಾಲೂಕು ಮಾದನಬಾವಿ ಗ್ರಾಮದಲ್ಲಿರುವ ಸಸ್ಯಕಾಶಿ ಅರಣ್ಯ ಪ್ರದೇಶ ದಲ್ಲಿಯಿಂದು ಪ್ರಾದೇಶಿಕ ಅರಣ್ಯ ವಲಯ ದಾವಣಗೆರೆ ಪ್ರಾದೇಶಿಕ ಅರಣ್ಯ ವಲಯ ಹೊನ್ನಾಳಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬಿತ್ಯೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಹೊನ್ನಾಳಿ ಪ್ರಧಾನ ನ್ಯಾಯಾಧೀಶರಾದ ಶ್ರೀ ಮಂಜುನಾಥ ಪಿಎಂ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಶ್ರೀ ದೇವದಾಸ್ ಜಂಟಿಯಾಗಿ ಸಸಿ ನೆಟ್ಟು ನೀರು ಉಣಿಸುವುದರ ಮೂಲಕ ಚಾಲನೆ ನೀಡಿದರು. ಪ್ರಧಾನ ನ್ಯಾಯಾಧೀಶರಾದ ಶ್ರೀ ಮಂಜುನಾಥ ಪಿಎಂ ರವರು ನಂತರ ಮಾತನಾಡಿ ಒಂದು ಸುಂದರ ಸಮಾಜವನ್ನು ಹೇಗೆ ನಿರ್ಮಾಣ ಮಾಡುತ್ತೇವೆಯೋ, ಅದೇ ರೀತಿ ಆರೋಗ್ಯಪೂರ್ಣ ಸಮಾಜ ಸುಂದರ ಪರಿಸರ ಇರಬೇಕಾದರೆ ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ರಸ್ತೆಯ ಅಕ್ಕಪಕ್ಕದ ಇಕ್ಕೀಲುಗಳಲ್ಲಿ ಸಸಿಯನ್ನು ನೆಟ್ಟು ನೀರು ಹಾಕಿ ,ನಮ್ಮ ನಮ್ಮ ಮಕ್ಕಳ ರೀತಿಯಲ್ಲಿ ಬೆಳೆಸಿ ಪೋಷಿಸಿದಾಗ ದೊಡ್ಡ ಅರಣ್ಯವಾಗಿ ಬೆಳೆದು ಮಳೆಯಿಂದ ಭೂಮಿತಾಯಿಯಲ್ಲಿ ಬಿತ್ತಿದ ಬೀಜ ‌ಬೆಳೆ ಸಮೃದ್ಧಿಯಾಗಿ ಬಂದು ರೈತನ ಬದುಕು ಹಸನಾಗಲಿಕ್ಕೆ ಸಾಧ್ಯ, ಹಾಗಾಗಿ ವಿಶ್ವ ಪರಿಸರ ದಿನ ಎಂದು ಒಂದೇ ದಿನ ಆಚರಿಸಿದರೆ ಸಾಲದು ದಟ್ಟವಾಗಿ ಬೆಳೆದ ಮರವನ್ನು ಕಡೆಯದೆ ಉಳಿಸಿ, ಪ್ರತಿಯೊಬ್ಬರು ಕಾಡನ್ನು ಬೆಳೆಸಿ ನಾಡನ್ನು ಉಳಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ನ್ಯಾಯಾಧೀಶರಾದ ಶ್ರೀ ದೇವದಾಸ್ ವಕೀಲರ ಸಂಘದ ಅಧ್ಯಕ್ಷ ಉಮಕಾಂತ ಜೋಯಿಸ್ ,ಉಪಾಧ್ಯಕ್ಷರಾದ ಟಿ ಉಮೇಶ್, ಕಾರ್ಯದರ್ಶಿ ಷಣ್ಮುಖ ಬಿ, ವಲಯ ಅರಣ್ಯ ಅಧಿಕಾರಿ ಚೇತನ್, ಉಪ ಅರಣ್ಯಾಧಿಕಾರಿ ಶಿವಯೋಗಿ, ಬರ್ಕಥ್ ಅಲಿ, ಅರಣ್ಯ ರಕ್ಷಕರು, ಅರಣ್ಯ ಪೋಷಕರು ಮತ್ತು ಸಾಮಾಜಿಕ ಅರಣ್ಯ ಅಧಿಕಾರಿ ಷಣ್ಮುಖ, ಅವರ ಸಿಬ್ಬಂದಿ ವರ್ಗದವರು ಸಹ ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *