ನ್ಯಾಮತಿ: ಅಕ್ರಮ ಹಾಗೂ ಸಕ್ರಮ ಕಾಮಗಾರಿಗಳನ್ನು ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ಉಪ ಗುತ್ತಿಗೆ ನೀಡಬೇಕು ಎಂದು ಆಗ್ರಹಿಸಿ ಹೊನ್ನಾಳಿ- ನ್ಯಾಮತಿ ತಾಲ್ಲೂಕಿನÀ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಮುಖಂಡರುಗಳು ಒತ್ತಾಯಿಸಿದರು.
ಪಟ್ಟಣದ ಬೆಸ್ಕಾಂ ಕಚೇರಿ ಮುಂಭಾಗ ಬುಧವಾರ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ಥಳಿಯ ಕಾಮಗಾರಿಗಳನ್ನು ಮೈಸೂರಿನ ಮೂಲದವರಿಗೆ ಟೆಂಡರ್ ಆಗಿದೆ,ಅವರು ಅವರ ಸಿಬ್ಬಂಧಿಗಳು ಮಳೆಗಾಲದಲ್ಲಿ ಬಂದು ಇಲ್ಲಿ ಕೆಲಸ ಮಾಡಲಿಕ್ಕೆ ಸಾಧ್ಯನಾ? ಸ್ಥಳೀಯ ಗುತ್ತಿಗೆದಾರರೆ ಇಲ್ಲಿನ ಬೆಸ್ಕಾಂ ತುರ್ತು ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದು,ನಮಗೇ ಈ ಟೆಂಡರ್‍ನ ಉಪ ಗುತ್ತಿಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಅಕ್ರಮ ಸಕ್ರಮ ಆರಆರ್ ನಂಬರ್‍ಗಳ ಬಾಬ್ತನ್ನು ಸ್ಥಳಿಯ ಗುತ್ತಿಗೆದಾರರು ರೈತರ ಮನವೊಲಿಸಿ ಹಣ ಕಟ್ಟಿಸಿದ್ದಾರೆ,ಇಲಾಖೆಯ ನಷ್ಟವನ್ನು ಕಡಿಮೆ ಮಾಡಿರುವ ಸ್ಥಳೀಯ ಗುತ್ತಿಗೆದಾರರು ಇಲಾಖೆಗೆ ಸಹಾಯ ಮಾಡಾಇದ್ದಾರೆ, ಪರಿಸ್ಥಿತಿ ಹೀಗಿರುವಾಗ ಸರ್ಕಾರ ಟೆಂಡರ್‍ನ್ನು ಸ್ಥಳೀಯರಿಗೆ ನೀಡದೆ ಬೇರೆಯವರಿಗೆ ನೀಡಿದರೆ ನಾವು ಏನು ಮಾಡಬೇಕು ಎಂದ ಅವರು,ಇಲ್ಲಿನ ಕಾಂಗಾರಿಗಳನ್ನೇ ನಂಬಿಕೊಂಡು ಟ್ರಾಕ್ಟರ್ ಹಾಗು ಡಿಗ್ಗರ್‍ಗಳನ್ನು ಖರೀಧಿ ಮಾಡಿದ್ದಾರೆ,ಈಗ ಕೆಲಸ ಇಲ್ಲದೆ ನಮ್ಮ ವಾಹÀಗಳು ಮೂಲೆ ಸೇರಿವೆ ಅದರ ಸಾಲ ಕೂಡ ನಾವುಗಳು ತೀರಿಸಿಲ್ಲ ಎಂದು ತಮ್ಮ ಅವಲತ್ತನ್ನು ತೋಡಿಕೊಂಡರು.
ದೊಡ್ಡ ದೊಡ್ಡ ಗುತ್ತಿಗೆದಾರರ ಕಾಮಗಾರಿಗಳನ್ನು ಟೆಂಡರ್ ಮೂಲಕ ಪಡೆದುಕೊಂಡಿದ್ದಾರೆ, ಆ ಕಮಾಗಾರಿಗಳನ್ನು ಉಪ ಗುತ್ತಿಗೆಯನ್ನು ನಮಗೆ ನೀಡಿದರೆ ನಮಗೆ ಅನುಕೂಲವಾಗುತ್ತದೆ ಎಂದರು. ದೊಡ್ಡ ಗುತ್ತಿಗೆದಾರರು ಹೆಚ್ಚಿನ ಧರಕ್ಕೆ ಟೆಂಡರ್ ಪಡೆದಿದ್ದರೂ ಸಹ ನಾವುಗಳು ಮಾತ್ರ ಬೆವಿಕಂ ನ ಎಸ್‍ಆರ್ ಪ್ರಕಾರ ಕೆಲಸ ಮಾಡಲು ತಯಾರಿದ್ದೇವೆ,ಇದರಿಂದ ಇಲಾಖೆಗೆ ಹಾಗೂ ಗ್ರಹಕರಿಗೂ ಆರ್ಥಿಕ ಹೊರೆ ಕಡಿಮಯಾಗುತ್ತದೆ ಎಂದರು.
ರಾಜ್ಯ ಸರ್ಕಾರವೇ 1 ರಿಂದ 5 ಲಕ್ಷ ವರೆಗಿನ ಗುತ್ತಿಗೆಯನ್ನು ಸ್ಥಳಿಯ ಗತ್ತಿಗೆದಾರರಿಗೆ ನೀಡಬೇಕು ಎಂದು ಆದೇಶ ಮಾಡಿದ್ದರೂ ಸಹ ಇನ್ನೂ ಅಧಿಕಾರಿಗಳು ಆ ಆದೇಶವನ್ನು ಜಾರಿಗೆ ತಂದಿಲ್ಲ ಎಂದ ಅವರು,ಕೂಡಲೆ ಸರ್ಕಾರ ಆದೇಶ ಮಾಡಿರುವುದನ್ನು ಅಧಿಕಾರಿಗಳು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕಳೆದ ಮೂರು ವರ್ಷದಲ್ಲಿ ಕೋವಿಡ್‍ನ ನಷ್ಟದಿಂದ ಸ್ಥಳೀಯ ಗುತ್ತಿಗೆದಾರರು ಬಾರೀ ನಷ್ಟದಿಂದ ಬೀದಿಗೆ ಬಿದ್ದಿದ್ದಾರೆ,ಈಗ ಮತ್ತೆ ಅದೇ ರೀತಿ ಆದರೆ ನಾವುಗಳು ವಿಷ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಉಮೇಸ್, ಹೊನ್ನಾಳಿ ಘಟಕದ ಅಧ್ಯಕ್ಷ ಚನ್ನಬಸಪ್ಪ,ನ್ಯಾಮತಿ ತಾಲೂಕು ಅಧ್ಯಕ್ಷ ಯೋಗರಾಜರೆಡ್ಡಿ,ತಿಮ್ಮನಗೌಡ್ರು,ಲಕ್ಷ್ಮಣನಾಯ್ಕ್,ದೇವರಾಜ್,ಉಮೇಶ್,ಕುಮಾರ್ ಜಿ.ಎಚ್.ಹಾಲೇಶ್,ನಾಗರಾಜಪ್ಪ,ಮಂಜಪ್ಪ,ಚಂದ್ರಪ್ಪ ಕೇಶವನಾಯ್ಕ್,ಹಾಗೂ ಇತರರು ಇದ್ದರು.