ನ್ಯಾಮತಿ:ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎರಡು ಎನ್‍ಎಸ್‍ಎಸ್ ಘಟಕಗಳಿಂದ ತಾಲ್ಲೂಕಿನ ಯರಗನಾಳ್ ಗ್ರಾಮದಲ್ಲಿ ಜೂನ್ 10ರಿಂದ 16ರವರೆಗೆ 2022-23ನೇ ಸಾಲಿ£ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಬಿ.ಆನಂದ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಗ್ರಾಮಸ್ಥರ ಆಶ್ರದಲ್ಲಿ ‘ಸದೃಢ ಭಾರತಕ್ಕಾಗಿ ಸದೃಢ ಯುವಕರು-ಸ್ವಚ್ಛ ಭಾರತ ಆಂದೋಲನಾ ಅಡಿಯಲ್ಲಿ ಶಿಬಿರ ಆಯೋಜಿಸಲಾಗಿದೆ.
ಯರಗನಾಳ್ ಸಮುದಾಯ ಭವನದಲ್ಲಿ ಶನಿವಾರ ಸಂಜೆ 6 ಗಂಟೆಗೆ ಶಾಸಕ ಡಿ.ಜಿ.ಶಾಂಗನಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಪ್ರಾಂಶುಪಾಲ ಬಿ.ಆನಂದ ಅಧ್ಯಕ್ಷತೆ ವಹಿಸುವರು.
ಇದೇ 11ರ ಸಂಜೆ 6ಕ್ಕೆ ಸೈಬರ್‍ಕ್ರೈಮ್, ಆದುನಿಕ ಕೃಷಿ ಪದ್ಧತಿ ಕುರಿತು ಉಪನ್ಯಾಸ ನಡೆಯಲಿದೆ.
12ರ ಬೆಳಿಗ್ಗೆ ಯೋಗ ಮತ್ತು ಆರೋಗ್ಯ ಉಚಿತ ಜಾನುವಾರು ತಪಾಸಣೆ.ಸಂಜೆ 6ಕ್ಕೆ ಶರಣ ತತ್ವ ಚಿಂತನೆ, ರೈತಜೀವನ ಪದ್ಧತಿ ಉಪನ್ಯಾಸ ನಡೆಯಲಿದೆ.13ರಂದು ಬೆಳಿಗ್ಗೆ ಆರೋಗ್ಯ ತಪಾಸಣ ಶಿಬಿರ.ಸಂಜೆ 6ಕ್ಕೆ ಹಣಕಾಸು ಸಾಕ್ಷರತೆ, ಭವ್ಯ ಭಾರತದ ನಿರ್ಮಾಣದಲ್ಲಿ ಗ್ರಾಮಗಳ ಪಾತ್ರಕಾರ್ಯಕ್ರಮ ಇದೆ.
14ರಂದು ಬೆಳಿಗ್ಗೆ ಅಗ್ನಿಶಾಮಕ ಪ್ರಾತ್ಯಕ್ಷಿಕೆ, ಸಂಜೆ 6ಕ್ಕೆ ‘ಯುವಜನತೆ ಮತ್ತು ಹವ್ಯಾಸಗಳು’ಜನಪದ ಸಾಹಿತ್ಯ’ಕುರಿತು ಉಪನ್ಯಾಸ. 15ರಂದು ಬೆಳಿಗ್ಗೆ 11-30ಕ್ಕೆ ಉಚಿತ ಕಣ್ಣಿನ ಸಪಾಸಣಾ ಶಿಬಿರ. ಸಂಜೆ 6ಕ್ಕೆ ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ವ್ಯವಸ್ಥೆ’ ಭಾರತೀಯ ಸಂಸ್ಕøತಿ ಮತ್ತು ಸಂಪ್ರದಾಯ’ ಉಪನ್ಯಾಸ ನಡೆಯಲಿದೆ.
16ರಂದು ಮಧ್ಯಾಹ್ನ 12ಕ್ಕೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಮರೋಪ ಭಾಷಣ ಮಾಡಲಿದ್ದಾರೆಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎನ್‍ಎಸ್‍ಎಸ್ ಅಧಿಕಾರಿಗಳಾದ ಡಿ.ಶಿವಕುಮಾರ, ಎನ್. ದಯಾನಂದಮೂರ್ತಿ ಇದ್ದರು.