ನ್ಯಾಮತಿ: ತಾಲೂಕ್ (ಸಳಂಗ) ಸಾಲ ಬಾಳು ಗ್ರಾಮದ ಸುತ್ತಮುತ್ತಲಿನ ಜಮೀನ ಭಾಗಗಳಲ್ಲಿ ಕಾಡುಕೋಣ ಓಡಾಡುವುದು ಕಂಡುಬಂದಿದ್ದು ಸಳಂಗ ಸಾಲ್ಬಾಳು ಮಾದಾಪುರ ಸುತ್ತಮುತ್ತಲಿನ ಗ್ರಾಮದ ಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಗೆ ಸುದ್ದಿ ತಿಳಿದ ತಕ್ಷಣ ಡಿ ಸಿ ಎಫ್ ಜಗನ್ನಾಥ್ ಮಾರ್ಗದರ್ಶನದಲ್ಲಿ ಜೂನ್ 10 ಶನಿವಾರ ಬೆಳಗ್ಗೆ 8:00ಯಿಂದ ದಾವಣಗೆರೆ ಎಸಿಎಫ್ ಮೋಹನ್ ನೇತೃತ್ವದಲ್ಲಿ ಸುಮಾರು 35 ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರ ತಂಡ ಕಾರ್ಯಚರಣೆ ನಡೆಸಿದ್ದು ಆ ಕಾಡುಕೋಣವು ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರನ್ನು ಕಂಡು ಜೋರಾಗಿ ಓಡುತ್ತಿದ್ದು ಅದನ್ನ ಬೆನ್ನಟ್ಟಿ ಬೆಂಬಿಡದೆ ಇಲಾಖೆಯವರು ಕಾರ್ಯಪ್ರವೃತ್ತರಾಗಿದ್ದೇವೆ.
ಕಾಡುಕೋಣದಿಂದ ಸಾರ್ವಜನಿಕರಿಗೆ ಯಾವುದೇ ಅಪಾಯ ಇಲ್ಲ ಆದಷ್ಟು ಬೇಗ ಕಾಡುಕೋಣವನ್ನು ಹಿಡಿದು ದಟ್ಟ ಅರಣ್ಯಕ್ಕೆ ಬಿಡಲಾಗುವುದು ಎಂದು ಹೊನ್ನಾಳಿ ವಲಯ ಅರಣ್ಯಾಧಿಕಾರಿ ಚೇತನ್ ಕುಮಾರರವರು ತಿಳಿಸಿದ್ದಾರೆ.