ನ್ಯಾಮತಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ಹೊಳೆ ನೀರನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಕ್ಷಮೆ ಕೋರಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ .
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಗಣೇಶ್ ರಾವ್ ಗೋವಿನಕೊವಿ ಗ್ರಾಮದ ತುಂಗಭದ್ರ ನದಿ ತಟದಲ್ಲಿರುವ ಇಂಟೆಕ್ ವೆಲ್ ವೀಕ್ಷಣೆ ಮಾಡಿ ನಂತರ ಮಾತನಾಡಿದ ಅವರು ನ್ಯಾಮತಿ ಪಟ್ಟಣ ಹಾಗೂ ಅರೇಹಳ್ಳಿ ಕೊಡಚಗೊಂಡನಹಳ್ಳಿ ಸುರುವೊನ್ನೇ ಗ್ರಾಮ ವ್ಯಾಪ್ತಿಗಳಿಗೆ ಒಳಗೊಂಡಂತೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯಿಂದ ತುಂಗಭದ್ರ ನದಿಯಿಂದ ಹೊಳೆಯ ನೀರನ್ನು ಒದಗಿಸಲಾಗುತ್ತಿತ್ತು. ಈ ವರ್ಷದ ಪ್ರಸಕ್ತ ಸಾಲಿನ ಮುಂಗಾರು ಮಳೆಯು ಬಾರದೆ ಹಿನ್ನೆಲೆಯಲ್ಲಿ ನದಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತಂದಿರುವಂತೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಎಇಇ ರವರು ಭೇಟಿ ನೀಡಿ ತುರ್ತಾಗಿ ಕೆಲಸ ನಿರ್ವಹಿಸುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ನ್ಯಾಮತಿ ಪಟ್ಟಣ ಮತ್ತು ಇತರ ಗ್ರಾಮಗಳಿಗೆ ಸೇರಿದಂತೆ ಸಾರ್ವಜನಿಕರಿಗೆ ಹಾಗೂ ದನ ಕರುಗಳಿಗೆ ಕುಡಿಯುವ ನೀರು ಸಿಗದೇ ತೊಂದರೆ ಆಗುತ್ತದೆ ಅದನ್ನು ಮನಗೊಂಡು ಇಂದು ಮಂಗಳವಾರ
ಬೆಳಗ್ಗೆ 6 ಗಂಟೆಯಿಂದ ಕೆಲಸ ಪ್ರಾರಂಭಿಸಿ ಒಂದು ಜೆಸಿಬಿ ಒಂದು ಇಟಾಚಿ ಎರಡು ಟ್ರ್ಯಾಕ್ಟರ್ ಹಾಗೂ 25 ಜನ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ತಾತ್ಕಾಲಿಕ ವಾಗಿ ಒಡ್ಡು ಕಟ್ಟಿ ಜಾಕೊಲ್ ಕಡೆಗೆ ನೀರು ಹರಿಸುವ ಕೆಲಸ ಮಾಡಲಾಯಿತು ಎಂದು ತಿಳಿಸುತ್ತಾ ಇವತ್ತು ಸಂಜೆಯ ಒಳಗಡೆ ಕೆಲಸ ಪೂರ್ಣಗೊಂಡು ಬುಧವಾರ ಬೆಳಗ್ಗೆ ಪಟ್ಟಣದ ಸಾರ್ವಜನಿಕರಿಗೆ ನೀರನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಇಂಜಿನಿಯರ್ ದೇವರಾಜ್ ಮತ್ತು ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಗೂ ಪೌರ ಕಾರ್ಮಿಕರು ಸಹ ಈ ಕಾರ್ಯದಲ್ಲಿ ಭಾಗವಹಿಸಿದ್ದರು.