ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಸನ್ಮಾನ ಕಾರ್ಯಕ್ರಮ
ನ್ಯಾಮತಿ: ತಾಲ್ಲೂಕುಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವುದಾಗಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿರುವುದಕ್ಕೆ ಬಿಜೆಪಿ ಶಾಸಕರೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಆಯೋಜಿಸಿದ್ದ ಅಭಿನಂದನೆ ಮತ್ತು ಸನ್ಮಾನ ಸಮಾರಂಭªನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಥಮ ಶಾಸಕಾಂಗ ಸಭೆಗೆ ತಾವು ಹೋಗಿದ್ದಾಗ ಬಿಜೆಪಿ ಗೆಳೆಯರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಾಣಕ್ಷತನ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಯುವಶಕ್ತಿ ಮತ್ತು 5 ಗ್ಯಾರಂಟಿಗಳ ಘೋಷಣೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಹೇಳಿದರು. ಆದರೆ ಕೆಲವರು ಗ್ಯಾರಂಟಿಗಳ ಬಗ್ಗೆ ಅಸೂಯೆಯಿಂದ ಟೀಕೆ ಮಾಡುತ್ತಾರೆ ಎಂದರು.
ಅವಳಿ ತಾಲ್ಲೂಕಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳು, ಭ್ರಷ್ಟಾಚಾರ, ಅವ್ಯವಹಾರ ಮಿತಿ ಮೀರಿ ನಡೆದಿದ್ದು, ಅಧಿಕಾರಿಗಳು ಸಹ ಕರ್ತವ್ಯಲೋಪವೆಸಗಿದ್ದಾರೆ. ಅವುಗಳ ಬಗ್ಗೆ ಗಮನಹರಿಸಬೇಕೆದೆ. ಪಟ್ಟಣದ ನಾಗರೀಕರು ಸುಮಾರು 26 ಸಮಸ್ಯೆಗಳ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿದ್ದಾರೆ. ಅವುಗಳ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.
ನ್ಯಾಮತಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಡಿ.ಜಿ.ವಿಶ್ವನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಶಾಸಕರು ಬೇರೆಯವರ ಮೇಲೆ ಅಪಾದನೆ ಮಾಡುವ ಮೊದಲು, ತಾವು ಹಿಂದೆ ಹೇಗಿ ಇದ್ದೇವು ಎಂಬುದನ್ನು ಅರಿಯಬೇಕು, ತಾಳ್ಮೆಯಿಂದ ವರ್ತಿಸಬೇಕು, ನನ್ನ ಮೇಲೆ ಭ್ರಷ್ಠಾಚಾರ ಅಪಾದನೆ ಮಾಡುವ ಅವರು ಧರ್ಮಸ್ಥಳಕ್ಕೆ ಬಂದು ತಾವು ಹೇಗೆ ಹಣ ಗಳಿಸಿದ್ದಾರೆ ಎಂಬುದರ ಬಗ್ಗೆ ಪ್ರಮಾಣ ಮಾಡಲಿ ಎಂದರು.
ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ, ರಾಜ್ಯ ಹಿಂದುಳಿದ ಆಯೋಗದ ಉಪಾಧ್ಯಕ್ಷ ಎಚ್.ಎ.ಉಮಾಪತಿ,ಕೆಪಿಸಿಸಿ ಸದಸ್ಯ ಡಾ.ಈಶ್ವರನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಮ್ಮ, ಮುಖಂಡರಾದ ನುಚ್ಚಿನ ವಾಗೀಶ, ಪೂಜಾರ ಚಂದ್ರಶೇಖರ ಮಾತನಾಡಿದರು.
ನಗರ ಘಟಕದ ಅಧ್ಯಕ್ಷ ಜಿ.ಲೋಕೇಶ, ಉಪಾಧ್ಯಕ್ಷ ವಾಲ್ಮೀಕಿ ಷಣ್ಮುಖ, ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಶಿವಯೋಗಿ, ಮುಖಂಡರಾದ ಹನುಮನಹಳ್ಳಿ ಬಸವರಾಜಪ್ಪ, ರವಿತೋಂಟದಾರ್ಯ, ಶಿವರಾಮನಾಯ್ಕ, ಪೀರ್ಯಾನಾಯ್ಕ, .ಮೇಘರಾಜ, ಶಿವನಗೌಡ,ಜೀವೇಶಪ್ಪ ಸುನೀತಾ ಷಣ್ಮುಖಪ್ಪ, ಸುನೀತಾ ಹನುಮಂತರಾವ್, ಎಸ್. ಸುಧಾ, ಶಿವರಾಜ, ರೆಡ್ಡಿ ವಿನಯ, ಕತ್ತಿಗೆ ವೀರೇಶ ಉಪಸ್ಥಿತರಿದ್ದರು.
ಕಾರ್ಯಕರ್ತರು, ಸಂಘ ಸಂಸ್ಥೆಗಳು, ವಿವಿಧ ಸಮುದಾಯದವರು ಶಾಸಕರನ್ನು ಸನ್ಮಾನಿಸಿದರು.
ಅಶ್ವಿನಿ ಪ್ರಾರ್ಥಿಸಿದರು, ಹೊಸಮನೆ ಮಲ್ಲಿಕಾರ್ಜುನ ಸ್ವಾಗತಿಸಿದರು, ಜೋಗದ ಸುರೇಶ ನಿರೂಪಿಸಿದರು.