ಕರ್ನಾಟಕ ಕಾನೂನು ಮತ್ತು ಶಾಸನ ರಚನೆ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಪ್ರವಾಸೋದ್ಯಮ ಸಚಿವ ಮತ್ತು ಎಐಸಿಸಿ ಮಹಾರಾಷ್ಟ್ರ ಉಸ್ತುವಾರಿಯಾದ ಶ್ರೀ.ಎಚ್.ಕೆ.ಪಾಟೀಲ ಅವರು ಮುಂಬೈಯಲ್ಲಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ ಸಮಿತಿಯ ಉನ್ನತ ಮಟ್ಟದ (ಕೋರ ಕಮೀಟಿ) ಸಭೆಯಲ್ಲಿ ಭಾಗವಹಿಸಿದ್ದರು. ಮುಂಬರುವ ಲೋಕಸಭಾ ಚುನಾವಣೆ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ ಸಮಿತಿಯ ಅಧ್ಯಕ್ಷ ನಾನಾ ಪಾಟೋಲೆ, ಮಾಜಿ ಮುಖ್ಯ ಮಂತ್ರಿಗಳಾದ ಅಶೋಕ ಚವ್ಹಾಣ, ತೆಲಂಗಾಣ ರಾಜ್ಯದ ಉಸ್ತುವಾರಿಯಾದ ಮಾಣಿಕರಾವ್ ಠಾಕ್ರೆ, ಪೃಥ್ವಿರಾಜ ಚವ್ಹಾಣ, ಸುಶೀಲಕುಮಾರ ಶಿಂಧೆ, ಹಿರಿಯ ಧುರೀಣರಾದ ಮಾಣಿಕರಾವ್, ಸಂಪತಕುಮಾರ, ಆಶೀಸ್ ದುವಾ, ಸೋನಾ ಪಟೇಲ್, ಅಸ್ಲಂ ಶೇಖ, ರಾಜ್ಯ ಕಾರ್ಯಾದ್ಯಕ್ಷ ನಸೀಮ್ ಖಾನ್, ಬಂಟಿ ಪಾಟೀಲ, ಕುಣಾಲ್ ಪಾಟೀಲ, ಶಾಸಕಿ ಪ್ರಗತಿ ಶಿಂಧೆ, ಶಾಸಕ ಅಮಿನ್ ಪಟೇಲ್, ಮುಖ್ಯ ವಕ್ತಾರ ಅತುಲ್ ಲುಂದೆ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ದೇವಾನಂದ ಪವಾರ, ಪ್ರಮೋದ ಮೋರೆ ಬಸವರಾಜ ಪಾಟೀಲ, ಅಖಿಲ ಭಾರತ ಕಾಂಗ್ರೆಸ ಸಮಿತಿಯ ಜಂಟಿ ಉಸ್ತುವಾರಿ ಸಂಪತಕುಮಾರ ಹಾಗೂ ಕಾಂಗ್ರೆಸ ಪಕ್ಷದ ಇತರೆ ಹಲವಾರು ಮಂಚೂಣಿ ಘಟಕದ ಮುಖಂಡರುಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಚಿವ ಎಚ್.ಕೆ.ಪಾಟೀಲರವರನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ ಸಮಿತಿಯು ಸನ್ಮಾನಿಸಿತು.