ನ್ಯಾಮತಿ :ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯತಿಯಲ್ಲಿಂದು ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಯಿತು.
ಹಿಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಹಾಗೂ ಸಾರ್ವಜನಿಕರ ಹವಾಲುಗಳನ್ನು ಈ ಸಾಮಾನ್ಯ ಸಭೆಯಲ್ಲಿ ಇತ್ಯರ್ಥ ಗೊಳಿಸಿದರು. ಗ್ರಾಪಂ ಉಪಾಧ್ಯಕ್ಷರಾದ ಪ್ರಕಾಶ್ ನಾಯ್ಕ್ ಸಭೆ, ಉದ್ದೇಶಿಸಿ ಮಾತನಾಡಿ ನಮ್ಮ ಮುಸ್ಯನಾಳ ಗ್ರಾಮವು ಸುಮಾರು 80 ವರ್ಷಗಳಿಂದ ಸರ್ವೆ ನಂ 36 37 38 19,ರಲ್ಲಿಇರುವ 8 ಎಕರೆ 10 ಗುಂಟೆ ಜಾಗವು ತಾಲೂಕು ನಿರ್ವಾಣಧಿಕಾರಿಗಳ ಹೆಸರಿನಲ್ಲಿದು
150ಕ್ಕೂ ಹೆಚ್ಚು ಮನೆಗಳು ಕಟ್ಟಿಕೊಂಡು ಜನರು ವಾಸಿಸುತ್ತಿದ್ದು, ಆ ಮನೆಗಳಿಂದ ಮನೆ ಕಂದಾಯ, ನೀರಿನ ಕಂದಾಯ ಗ್ರಾಮದವರು ಕಟ್ಟುತ್ತಿದ್ದಾರೆ, ಅವರುಗಳಿಗೆ ಹಕ್ಕು ಪತ್ರ ಈ ಸ್ವತ್ತು ಸಿಗದೇ ಸಂಕಷ್ಟ ಅನುಭವಿಸುತ್ತಿದ್ದು ಸುಮಾರು ನಮ್ಮ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯಗಳ ಒಪ್ಪಿಗೆಯ ಮೇರೆಗೆ ತಾಲೂಕು ನಿರ್ವಾಣಧಿಕಾರಿಗಳ ನಮ್ಮ ಮುಸ್ಯನಾಳ ಗ್ರಾಮದ ಸರ್ವೆ ನಂ ಮತ್ತು ಜಿಲ್ಲಾಧಿಕಾರಿಗಳಿಗೆ ಗಮನ ತಂದು ಅರ್ಜಿ ಸಲ್ಲಿಸಿದರು ಸಹ ಇಲ್ಲಿವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಹಾಗಾಗಿ ಶಾಸಕರಾದ ಡಿ ಜಿ ಶಾಂತನಗೌಡ್ರರವರು ತಾಲೂಕು ಮಟ್ಟದ ಅಧಿಕಾರಿಗಳಿಂದ ನಮ್ಮ ಮುಸೇನಾಳ ಗ್ರಾಮದ ಜನರಿಗೆ ಈ ಸ್ವತ್ತು ಸಿಗುವ ಹಾಗೆ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣವೇ ಮಾಡಿಸಿ ಕೊಡಬೇಕೆಂದು ಶಾಸಕರಿಗೆ ಮನವಿ ಮಾಡಿದರು . ಪಿಡಿಒ ಸೋಮಶೇಖರಪ್ಪ ಈ ಸಭೆಯಲ್ಲಿ ಮಾತನಾಡಿ ಪಿಐಆರ್‍ಡಿ ಇಲಾಖೆ ವತಿಯಿಂದ ಜೂನ್ 20ರಂದು ಸೌಳಂಗ ಆರೋಗ್ಯ ಕೇಂದ್ರದಲ್ಲಿ ಪಲವನಹಳ್ಳಿ ಚಟ್ನಹಳ್ಳಿ ಸೌಲಂಗ ಚಿನ್ನಿಕಟ್ಟೆ ಸೇರಿದಂತೆ ಸದಸ್ಯರುಗಳಿಗೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ದಿನದ ಕಾರ್ಯಗಾರ ಹಮ್ಮಿಕೊಂಡಿರಿವ ಹಿನ್ನೆಲೆಯಲ್ಲಿ ನಮ್ಮ ಪಂಚಾಯತಿಯ ಸರ್ವ ಸದಸ್ಯರು ಭಾಗಿಯಾಗಿ ತರಬೇತಿಯನ್ನು ಪಡೆಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸದಸ್ಯರುಗಳಾದ ಗೋವಿಂದ್ ರಾಜ್ ,ಪ್ರವೀಣ್ ಜಿ ಆರ್, ನಾಗೇಶ್ ನಾಯ್ಕ್, ಶಕುಂತಲಾ ಬಾಯಿ, ನೇತ್ರಮ್ಮ, ನಟರಾಜಪ್ಪ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಸಹ ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *