ಸಾಸ್ವೆಹಳ್ಳಿ;ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಳ್ಳಾಪುರ ಗ್ರಾಮದ ಹೊರ ವಲಯದಲ್ಲಿ 17 ಲಕ್ಷ ಮೊತ್ತದ ಮಹಾತ್ಮ ಗಾಂದಿ ರಾಷ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಡಿಯಲ್ಲಿ ನಿರ್ಮಿಸಲಾದ ಘನ ತ್ಯಾಜವಿಲೇವಾರಿ ಘಟಕ ಉದ್ಘಾಟನೆಯನ್ನು ಶಾಸಕ ಡಿ,ಜಿ. ಶಾಂತನಗೌಡ ಶನಿವಾರ ನೇರವೇರಿಸಿದರು.
ಶಾಸಕ ಡಿ.ಜಿ. ಶಾಂತನ ಗೌಡ ಮಾತಾನಾಡಿ ಇದು ಆವೈಜ್ಞಾನಿಕವಾಗಿದೆ ಈ ಕಾರ್ಯಕ್ರಮ ರೊಪಿಸುವ ಮುನ್ನ ಪೊರಕ ಮಾತ್ರ ಮಾಡಿದರೆ ಸಾಲದು ಬಾದಕವನ್ನು ಕಂಡುಕೊಳ್ಳಬೇಕು ಘನ ತ್ಯಾಜವನ್ನು ವಿಲೆವರಿ ಮಾಡುªವರಿಗೆ ಪ್ರತಿ ತಿಂಗಳು ಹಣ ನೀಡಬೇಕು ಇಲ್ಲದಿದ್ದರೆ ಕಾರ್ಮಿಕರು ಜೀವನ ಯಾವರೀತಿ ನೇಡೆಯಬೇಕು ಯಾರು ನೀಡುತ್ತಾರೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕೇಳಿದರು. .ನಂತರ ನಮ್ಮ ತಾಲೂಕಿನಲ್ಲಿ ಈ ಕಾರ್ಯಕ್ರಮ ಯಶಸ್ಸು ಕಂಡಿದಿಯಾ ಕಂಡಿದ್ದರೆ ಯಾವ ಗ್ರಾಮ ಪಂಚಾಯಿತಿ ತಿಳಿಸಿ ಎಂದಾಗ ಅಧಿಕಾರಿಗಳಿಂದ ಬಂದ ಉತ್ತರ ಮಾತ್ರ ಇಲ್ಲ ಎಂದಾಗ ಸ್ವಲ್ಪ ಸಿಡಿಮಿಡಿಗೊಂಡರು. ನಂತರ ನಿಮ್ಮ ಪಂಚಾಯಿತಿ ಸ್ವಚ್ಛತೆಯಲ್ಲಿ ಉಳಿದವರಿಗೆ ಮಾದರಿಯಾಗಲಿ ಎಂದರು.
ತಾಲೂಕು ಪಂಚಾತಿ ಕಾರ್ಯನಿರ್ವಾಹಣಾಧಿಕಾರಿ ರಾಮ ಭೋವಿ ಮಾತಾನಾಡಿ ಸ್ವಚ್ಛ ಸಂಕಿರ್ಣ ಸ್ಥಳ ಯೊಗ್ಯವಾಗಿದೆ ವಾಹನದ ಮೂಲಕ ಜನರು ಮನೆಗಳಿಂದ ನೀಡಿದ ಕಸವನ್ನು ಹಸಿ ಕಸ ,ಒಣಕಸವಾಗಿ ವಿಂಗಡನೆ ಮಾಡಿ ಗೊಬ್ಬgವಾಗಿ ಪರಿವರ್ತಿಸಿ ಇದರಿಂದ ನೀವು ಗ್ರಾಮ ನೈರ್ಮಲ್ಯವನವನ್ನು ಕಾಪಾಡಿದಂತಾಗುತ್ತದೆ ಎಂದರು,
ಕಾರ್ಯಕ್ರಮಕ್ಕೊ ಮುನ್ನ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣೆ ಕಾರ್ಯಕ್ರಮ ನೆಡೆಯಿತು. ಶಾಸಕರು ಬಿಪಿ ಮತ್ತು ಶುಗರ್ ಪರೀಕ್ಷೆ ಮಾಡಿಸಿದರು. ನಂತರ ಗ್ರಾಮ ಪಂಚಾಯಿತಿ ಸದಸ್ರರು ಹಾಗೂ ಗ್ರಾಮಸ್ಥರು ಪರೀಕ್ಷೆಗೆ ಸರದಿಯಲ್ಲಿ ನಿಂತು ಮಾಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷಮ್ಮ ಟಿ. ಉಪಾದ್ಯಕ್ಷ ಶ್ರೀನಿವಾಶ ,ಸದಸ್ಯರದಸುಶೀಲಮ್ಮ.ಯಾಸ್ಮಿನ್. ರಮೇಶ್ ಹೆಚ್ ಟಿ. ಪಿಡಿಒ. ರಾಘವೇಂದ್ರ, ಕಾರ್ಯದರ್ಶಿ ಹನುಮಂತಪ್ಪ ಹಾಗು ಆಶಾ ಕಾರ್ಯಕರ್ತರು ಇತರರು ಪಾಲ್ಗೋಂಡಿದ್ದರು.

Leave a Reply

Your email address will not be published. Required fields are marked *