ನ್ಯಾಮತಿ: ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಇಂದು ನೂತನ ಶಾಸಕ ಡಿ ಜಿ ಶಾಂತನಗೌಡ್ರು ಅಧ್ಯಕ್ಷತೆಯಲ್ಲಿ ಆಡಳಿತ ಅಧಿಕಾರಿ ಹಾಗೂ ತಾಲೂಕ್ ತಹಿಸಿಲ್ದಾರ್ ಆರ್ ವಿ ಕಟ್ಟಿ ಮತ್ತು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಗಣೇಶರಾವ್ ಪಿ ಇವರ ನೇತೃತ್ವದಲ್ಲಿ ಪ್ರಾಥಮಿಕ ಪೂರ್ವಭಾವಿ ಸಭೆ ನಡೆಸಲಾಯಿತು.
ಶಾಸಕ ಡಿ ಜಿ ಶಾಂತನಗೌಡ್ರುರವರು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರನ್ನು ಕುರಿತು ನಂತರ ಮಾತನಾಡಿ ಈ ಹಿಂದೆ ನಡೆದ ಕಾಮಗಾರಿಗಳು ಬಗ್ಗೆ ಹಾಗೂ ನ್ಯಾಮತಿ ಪಟ್ಟಣದಲ್ಲಿ ಮುಂದೆ ನಡೆಯಬೇಕಾಗಿರುವ ಕಾಮಗಾರಿಗಳ ಕ್ರಿಯಾಯೋಜನೆ ಬಗ್ಗೆ ಚರ್ಚಿಸಿ ರೂಪರೇಷಗಳನ್ನು ತಯಾರಿ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಸದ್ಯ ಈ ವಾರದಲ್ಲಿ ತಾಲೂಕು ಮಟ್ಟದ ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ, ಕಂದಾಯ ಇಲಾಖೆ, ಹಾಗೂ ಶಿಕ್ಷಣ ಇಲಾಖೆ, ಇನ್ನೂ ಹಲವಾರು ತಾಲೂಕು ಮಟ್ಟದ ಇಲಾಖೆ ಸೇರಿದಂತೆ ಶೀಘ್ರದಲ್ಲಿ ತಾಲೂಕ್ ಮಟ್ಟದ ಅಧಿಕಾರಿಗಳೂಂದುಗೆ ಸಭೆ ನಡೆಸಲಾಗುವುದು ಅದರ ಜೊತೆಗೆ ಸರ್ಕಾರಿ ಇಲಾಖೆಗಳಿಗೆ ಬರುವಂತ ಸಾರ್ವಜನಿಕರಿಗೆ ತಕ್ಷಣವೇ ಕೆಲಸ ಕಾರ್ಯಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಪಟ್ಟಣ ಪಂಚಾಯಿತಿ ವತಿಯಿಂದ ನೂತನ ಶಾಸಕ ಡಿ ಜಿ ಶಾಂತನಗೌಡ್ರುರವರಿಗೆ ಸನ್ಮಾನಿಸಲಾಯಿತು.ಈ ಸಭೆಯಲ್ಲಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹ ಇದ್ದರು.