ಹೊನ್ನಾಳಿ: ಯೋಗ ಪುರಾತನ ಕಲೆಯಾಗಿದೆ. ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹಲವು ರೋಗಗಳಿಗೆ ಮುಕ್ತಿಯನ್ನು ನೀಡಬಹುದು ಎಂದು ಮುನಿ ಶ್ರೇಷ್ಟರಾದ ಪತಂಜಲಿ ಮಹರ್ಷಿಯವರು ಸಹಸ್ರಾರು ವರ್ಷಗಳ ಹಿಂದೆಯೇ ಸಾರಿದ್ದಾರೆ ಎಂದು ಹೊನ್ನಾಳಿ ಪತಂಜಲಿ ಯೋಗ ಸಮಿತಿಯ ಸಂಚಾಲಕಾರದ ಪ್ರಕಾಶ್ ಹೆಬ್ಬಾರ್ ಹೇಳಿದರು.
ಪಟ್ಟಣದ ಪತಂಜಲಿ ಯೋಗ ಸಮತಿ ಹಾಗೂ ಭಾರತೀಯ ವಿದ್ಯಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟಿçÃಯ ಯೋಗದಿನದ ಮುನ್ನ ದಿನ ಜಾಥದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಅವರು ಮಂಗಳವಾರ ಮಾತನಾಡಿದರು.
ಯೋಗವು ಯೋಗ ದಿನಕ್ಕೆ ಮಾತ್ರ ಸೀಮಿತವಾಗದೆ ನಿರತಂರವಾಗಿ ನಡೆಯುತ್ತಿರಬೇಕು. ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ನಿರಂತರವಾಗಿ ಯೋಗ ತರಗತಿಗಳನ್ನು ಉಚಿತವಾಗಿ ಹೇಳಿಕೊಡಲಾಗುತ್ತಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡಿಸಿಕೊಳ್ಳಬೇಕು ಎಂಬ ಆಶಯದಿಂದ ಜಾಥದ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದೇವೆ. ಇನ್ನೂ ಹೆಚ್ಚಿನ ಯೋಗ ಕೇಂದ್ರಗಳನ್ನು ಪ್ರಾರಂಭಿಸುವ ಉತ್ಸುಕತೆ ನಮಗಿದೆ ಎಂದರು.
ಪತಂಜಲಿ ಯೋಗ ಸಮಿತಿಯ ಸಂಚಾಲಕರಾದ ರುದ್ರೇಶ್ ಎಂ.ಬಿ ಮಾತನಾಡಿ, ಯೋಗವನ್ನು ಭಾರತೀಯರು ಮಾತ್ರ ಅಳವಡಿಸಿಕೊಂಡಿಲ್ಲ ಇದರ ಉಪಯೋಗ ತಿಳಿದ ಪಾಶ್ಚಿಮಾತ್ಯ ದೇಶಗಳಲ್ಲಿ ಹಲವರು ಯೋಗ ಅಭ್ಯಾಸ ಮಾಡುತ್ತಿದ್ದಾರೆ. ಯೋಗವನ್ನು ಬಾಬಾ ರಾಮದೇವ್ ಗುರೂಜಿಯವರು ಸೇರಿದಂತೆ ಹಲವರು ಪ್ರಚಾರ ಮಾಡುತ್ತಿದ್ದಾರೆ. ಯೋಗವನ್ನು ಗುರು ಮುಖೇನ ಕಲಿಯುವುದು ದೇಹದ ಸ್ವಾಸ್ಥö್ಯಕ್ಕೆ ಒಳ್ಳೆಯದು ಎಂದರು.
ಭಾರತೀಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಪತಂಜಲಿ ಯೋಗ ಸಮಿತಿಯ ಸಹಯೋಗದಲ್ಲಿ ಪಟ್ಟಣದ ಕೋಟೆ, ಬಸ್ ನಿಲ್ದಾಣ, ಸರ್ವರ್ ಕೇರಿ, ಟಿ.ಎಂ ರಸ್ತೆ, ಮಾರಿಕೊಪ್ಪ ರಸ್ತೆಯಲ್ಲಿ ಜಾಥದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಸಂಚಾಲಕರಾದ ರಾಘವೇಂದ್ರ ಎಲ್ ವೈಶ್ಯರ, ಸುರೇಶ್ ಕುಂಬಾರ್, ಅಂಬಿಕಾ ಹೆಬ್ಬಾರ್, ಸುಜಾತ ಬೆನ್ನೂರ್‌ಮಠ್, ವಿದ್ಯಾ, ಬೀಜಿತಾ, ಶೀಲಾ, ಗಿರಿಜಮ್ಮ ಭಾರತೀಯ ವಿದ್ಯಾಸಂಸ್ಥೆಯ ಶಿಕ್ಷಕರಾದ ತಿಮ್ಮೇಶ್ ಆರ್. ಪುನೀತ್, ಶಿವಲಿಂಗಪ್ಪ, ರವಿ, ಸತೀಶ್, ಅನುಷಾ, ಮಂಜುನಾಥ್, ಗಿರೀಶ್ ಇದ್ದರು.