ಕೇಂದ್ರ ಸರ್ಕಾರದ ಪಿ.ಎಮ್.ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರು ಧನಸಹಾಯ ಪಡೆಯಲು ಇ-ಕೆವೈಸಿ (e-ಏಙಅ) ಮಾಡಿಸುವುದು ಕಡ್ಡಾಯವಾಗಿರುತ್ತದೆ.
ದಾವಣಗೆರೆ ತಾಲ್ಲೂಕಿನಲ್ಲಿ ಇನ್ನೂ 11738 ರೈತರ ಇ-ಕೆವೈಸಿ ಬಾಕಿ ಇದ್ದು, ರೈತರು ಇ-ಕೆವೈಸಿ ಮಾಡಿಸದಿದ್ದಲ್ಲಿ ಪಿ.ಎಮ್.ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ನೀಡಲಾಗುವ ಆರ್ಥಿಕ ಧನ ಸಹಾಯವನ್ನು ಸ್ಥಗಿತಗೊಳಿಸಲಾಗುತ್ತದೆ.
ಇ-ಕೆವೈಸಿ ಮಾಡಿಸಿಕೊಳ್ಳದ ಫಲಾನುಭವಿಗಳಿಗೆ ಮುಂದೆ ಆರ್ಥಿಕ ಸೌಲಭ್ಯ ದೊರೆಯುವುದಿಲ್ಲ. ಹಾಗೂ ಈವರೆಗೂ ಇ-ಕೆವೈಸಿ ಮಾಡಿಸದ ರೈತ ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ http://pmkisan.gov.in ಪಿ.ಎಂ.ಕಿಸಾನ್ ಪೆÇೀರ್ಟಲ್ ನ farmers corner £À e-KYC ಅವಕಾಶದಡಿ ಆಧಾರ್ ಸಂಖ್ಯೆಯನ್ನು ನಂತರ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾದ ಮೊಬೈಲ್ ಸಂಖ್ಯೆಯನ್ನು ದಾಖಲಿಸಿಬೇಕು. ಈ ಪ್ರಕ್ರಿಯೆಯ ನಂತರ ಸ್ವೀಕೃತವಾದ ಓಟಿಪಿಯನ್ನು ದಾಖಲಿಸಿ, ಸಬ್ಮಿಟ್ ಒಟಿಪಿ ಎಂಬ ಬಟನ್ ಒತ್ತುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಅಥವಾ ಸಮೀಪದ ಗ್ರಾಮಒನ್ ಕೇಂದ್ರ, ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಓಟಿಪಿ ಮೂಲಕ, ಮೊಬೈಲ್ನಲ್ಲಿರುವ ಪ್ಲೇ ಸ್ಟೋರ್ನಲ್ಲಿ Facial Authentication mobile app ಮೂಲಕ ಇ-ಕೆವೈಸಿ ಮಾಡಿಸಬಹುದು ಎಂದು ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.