ಹೊನ್ನಾಳಿ:ಕೊಟ್ಟ ಭರವಸೆಗಳನ್ನು ಈಡೇರಿಸುವುದೆ ಕಾಂಗ್ರೆಸ್ ಪಕ್ಷದ ಮುಖ್ಯ ಗುರಿಯಾಗಿದ್ದು ಈಗಾಗಲೇ ಶಕ್ತಿ ಯೋಜನೆ ಯಶಸ್ವಿಗಿದ್ದು 10 ಕೆಜಿ ಅಕ್ಕಿ ವಿತರಣೆಯಲ್ಲಿ ಕೇಂದ್ರ ಸರ್ಕಾರದ ದ್ವದ್ವ ನೀತಿಯಿಂದ ತಡವಾಗುತ್ತಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ತಾಲೂಕಿನ ಕೂಲಂಬಿ ಗ್ರಾಮದಲ್ಲಿ ಗ್ರಾಮಸ್ಥರಿಂದ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಉದ್ಧೇಶಪೂರ್ವಕವಾಗಿ ಈಗ ರಾಜ್ಯಕ್ಕೆ ಅಕ್ಕಿ ಕೊಡುತ್ತಿಲ್ಲ ಮೊದಲು ಕೊಡುತ್ತೇವೆ ಎಂದು ಹೇಳಿ ಈಗ ಅಕ್ಕಿ ಕೊಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ನೀಚ ಬುದ್ಧಿ ತೊರಿಸುತ್ತಿದೆ ಇಂತಹ ಕೆಟ್ಟ ರಾಜಕೀಯ ಕೇಂದ್ರ ಸರ್ಕಾರದವರು ಮಾಡಬಾರದು ಎಂದು ಕಿಡಿ ಕಾರಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬ ಹಿರಿಯರು ಅವರಿಗೆ ಗೌರವ ಕೊಡುತ್ತೇನೆ ಎಂದ ಅವರು, ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ವಿತರಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ ಇದು ಅವರಿಗೆ ಗೌರವ ತರುವ ಕೆಲಸವಲ್ಲ ಪ್ರತಿಭಟನೆ ಮಾಡಬಾರದೆಂದು ಅವರಿಗೆ ಮನವಿ ಮಾಡುತ್ತೇನೆ ಎಂದರು.
ಚುನಾವಣೆಗೂ ಮುನ್ನ ನಮ್ ಪಕ್ಷದ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದ್ದೇವೆಯೋ ಹೊರತು ಇದನ್ನು ಬಿಜೆಪಿಯವರು ತಿರುಚಿ ಕೇಂದ್ರದ 5ಕೆಜಿ ಹಾಗೂ ರಾಜ್ಯದ 10 ಕೆಜಿ ಸೇರಿ ಒಟ್ಟು 15 ಕೆಜಿ ಅಕ್ಕಿ ಕೊಡಿ ಎಂದು ಜನರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಇದಕ್ಕೆ ಯಾರೂ ಕಿವಿಗೊಡಬೇಡಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ನನ್ನನ್ನು ಗೆಲಿಸಿದ ಕಾರಣ ಪಕ್ಷದಿಂದ ಪ್ರತಿ ಗ್ರಾಮದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಬೇಕಿತ್ತು ಆದರೆ ನಮ್ಮ ಮತದಾರರೇ ತಾವೇ ದುಡ್ಡು ಹಾಕಿಕೊಂಡು ನನ್ನನ್ನು ಅಭಿನಂದಿಸುತ್ತಿದ್ದಾರೆ ಇದಕ್ಕೆ ನಾನು ಚಿರುಋಣಿಯಾಗಿರುತ್ತೇನೆ ಎಂದು ಹೇಳಿದರು.
ಅವಳಿ ತಾಲೂಕಿನ ಮಹಿಳಾ ಮತದಾರರು ಹಾಗೂ ಯುವಕರು ಬಿಜೆಪಿ ಜೊತೆಯಲ್ಲೇ ಇದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ ಈ ಚುನಾವಣೆಯಲ್ಲಿ ಮಹಿಳಾ ಮತದಾರರು ಮತ್ತು ಯುವಕರು ನಮ್ಮ ಪಕ್ಷದ ಕೈ ಹಿಡಿದಿದ್ದಾರೆ. ಅವಳಿ ತಾಲೂಕಿನ ಎಲ್ಲಾ ಗ್ರಾಮದ ಜನತೆ ಅತಿ ಹೆಚ್ಚು ಮತ ನೀಡಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರಿಗೆಲ್ಲ ನಾನು ಅಭಿನಂದಿಸುತ್ತೇನೆ ಎಂದರು.
ಕೂಲಂಬಿ ಗ್ರಾಮದ ಗ್ರಾಮಸ್ಥರು ಅನೇಕ ಬೇಡಿಕೆಗಳ ಈಡೇರಿಕೆಗಾಗಿ ನನ್ನ ಮುಂದೆ ಇಟ್ಟಿದ್ದಾರೆ. ಹಂತ ಹಂತವಾಗಿ ಗ್ರಾಮದ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿದರು.
ಚನ್ನಗಿರಿ ಶಾಸಕ ಬಸವರಾಜ ಶೀವಗಂಗಾ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಕೂಲಂಬಿ ಗ್ರಾಮದ ಮೊಮ್ಮಗನಾಗಿದ್ದು ಈ ಹಂತಕ್ಕೇರಲು ಕೂಲಂಬಿ ಗ್ರಾಮ ಕಾರಣವಾಗಿದೆ. ನನ್ನನ್ನು ಕೂಲಂಬಿ ಗ್ರಾಮದ ಮೊಮ್ಮಗ ಎಂದು ಕರೆಸಿ ಅಭಿನಂದಿಸಿದ್ದಕ್ಕೆ ಗ್ರಾಮದ ಮುಖಂಡರುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಶಿವಯೋಗಿ, ಕಾಂಗ್ರೆಸ್ ಮುಖಂಡರಗಳಾದ ಎಚ್.ಎ.ಉಮಾಪತಿ, ಬಿ.ಸಿದ್ದಪ್ಪ, ಶೀಮೋಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ, ಎಚ್.ಎ.ಗದ್ದಿಗೇಶ್, ಆರ್.ನಾಗಪ್ಪ, ಡಿ.ಜಿ.ವಿಶ್ವನಾಥ್, ರಾಜಶೇಖರ, ಮರಳುಸಿದ್ದಪ್ಪ ಮಾತನಾಡಿದರು.
ಗ್ರಾಮದ ಮುಖಂಡ ಹೇಮಂತರಾಜ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್, ಗ್ರಾಪಂ ಸದಸ್ಯ ರೇವಣಸಿದ್ದಪ್ಪ, ಕೆ.ಬಿ.ಬಸವರಾಜಪ್ಪ, ಕೆ.ಎಂ.ಬಸವಲಿಂಗಪ್ಪ, ಎಂ.ಜಿ.ಪಾಟೀಲ್, ಕೆ.ಬಿ.ಸಿದ್ದೇಶ್, ಗುರುರಾಜ್, ಎಚ್.ಎ.ಪುನಿತ್‍ಕುಮಾರ್, ರಹಮತುಲ್ಲಾ ಇತರರು ಇದ್ದರು.
ರಾಜಶೇಖರ್ ಸ್ವಾಗತಿಸಿ ನಿರೂಪಿಸಿದರು.

Leave a Reply

Your email address will not be published. Required fields are marked *