ನ್ಯಾಮತಿ: ತಾಲೂಕಿನ ಗೋವಿನ ಕೋವಿ ಹೋಬಳಿ ಕುರುವ ಗೆಡ್ಡೆ ರಾಮೇಶ್ವರ ದೇವಸ್ಥಾನದ ನಡುಗಡ್ದೆಯ ಆವರಣದಲ್ಲಿ ಮಾನ್ಯ ಅರಣ್ಯ ಸಚಿವರ ಆದೇಶದಂತೆ 1 ಕೋಟಿ ಸಸಿ ನೆಡುವ ಕಾಮಗಾರಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಸದರಿ ಸಸ್ಯ ನೆಡುವ ವನಮಹೋತ್ಸವ ಅಭಿಯಾನದ ಯೋಜನೆ ಅಡಿಯಲ್ಲಿ 1 ಕೋಟಿ ಸಸಿ ನೆಡುವ ಕಾಮಗಾರಿಯನ್ನು ದಾವಣಗೆರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ ಬಿ ಮೋಹನ್ ಕುಮಾರ್ ಸಸಿಗೆ ನೀರು ಉಣಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕರ್ನಾಟಕ ಸರ್ಕಾರದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರ ಆದೇಶದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಒಂದು ಕೋಟಿ ಸಸಿಗಳ ನೆಡುವ ಯೋಜನೆ ಅನ್ವಯ ನಮ್ಮ ಇಲಾಖೆಯ ವತಿಯಿಂದ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮತ್ತು ಶಾಲೆ ಕಾಲೇಜುಗಳು ಸಂಘ-ಸಂಸ್ಥೆಯವರು ವಿವಿಧ ಇಲಾಖೆಯ ಸಹಯೋಗದೊಂದಿಗೆ ಸಸಿ ನೆಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು. ಗಡ್ಡೆರಮೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ವಲಯ ಅರಣ್ಯಾಧಿಕಾರಿಗಳಾದ ಶ್ರೀ ಚೇತನ್ ಕೆ ಆರ್, ಶ್ರೀ ಷಣ್ಮುಖ, ಉಪವಲಯ ಅರಣ್ಯ ಅಧಿಕಾರಿಗಳಾದ ಬರ್ಕತ್ ಅಲಿ, ಶಿವಯೋಗಿ, ಶಾಲಿನಿ, ಮಂಜುನಾಥ್ ಹಾಗೂ ಗಸ್ತು ವನಪಾಲಕರುಗಳು ಅರಣ್ಯ ವೀಕ್ಷಕರು ಕೂಲಿಕಾರರು ವಾಹನ ಚಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.