ನ್ಯಾಮತಿ: ತಾಲೂಕು ಚೀಲೂರು ಗ್ರಾಮದಲ್ಲಿ ಅಲ್ಪಸಂಖ್ಯಾತರ ಮುಖಂಡರು ನನ್ನ ಮೇಲೆ ಅಭಿಮಾನ ವಿಟ್ಟು ರಕ್ತದಾನ ಶಿಬಿರದಂತಹ ಸಮಾಜಮುಖಿ ಕಾರ್ಯಕ್ರಮ ಮೂಲಕ ನನಗೆ ಅಭಿನಂದನೆ ಮತ್ತು ಸನ್ಮಾನ ಮಾಡುತ್ತಿರುವುದು ನಿಜಕ್ಕೂ ನನ್ನ ಪುಣ್ಯ ಎಂದು ಶಾಸಕ ಡಿ ಜಿ ಶಾಂತನಗೌಡ್ರು ಹೇಳಿದರು.
ಚೀಲೂರು ಗ್ರಾಮದ ಮುಸ್ಲಿಂ ಕಾಲೋನಿಯಲ್ಲಿ ಮುಸ್ಲಿಂ ಸಮುದಾಯದವರ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ ಅವರು ಭಾರತ ದೇಶವು ತನ್ನದೇ ಆದ ವೈಶಿಷ್ಟ ಸಂವಿದಾನದ ಮೂಲಕ ಜಾತ್ಯತೀತ ತತ್ವ ಮನೋಭಾವನೆ ಹಾಗೂ ವಿವಿಧತೆಯಲ್ಲಿ ಏಕತೆ ಎನ್ನುವ ಹಾಗೆ ಹಿಂದೂ ಮುಸ್ಲಿಂ, ಕ್ರೈಸ್ತ ,ಸಿಖ್ ಹತ್ತಾರು ಧರ್ಮಗಳ ಸಮುದಾಯದವರು ಪರಸ್ಪರ ಭಾವೈಕ್ಯತೆಯಿಂದ ಸಹೋದರ ಭಾತೃತ್ವದಲ್ಲಿ ವಿಶ್ವವೇ ಮೆಚ್ಚುವಂತಹ ನಾವು ಬದುಕನ್ನ ಸಾಗಿಸುತಿದ್ದೇವೆ. ಆದರೆ ಕೆಲವರು ರಾಜಕೀಯ ಲಾಭಕ್ಕಾಗಿ ಧರ್ಮ ಧರ್ಮಗಳ ಮಧ್ಯೆ ಇಲ್ಲಸಲ್ಲದ ಬಿರುಕು ಮೂಡಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಇತ್ತೀಚಿಗೆ 2023 ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಡವರು ಅಲ್ಪಸಂಖ್ಯಾತರು ದಲಿತರು ಇನ್ನು ಹಲವಾರು ಸಮುದಾಯದವರು ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪರವಾಗಿ ಅಭೂತ ಪೂರ್ವ ಮತವನ್ನು ಚಲಾಯಿಸಿ ನಮ್ಮ ಕ್ಷೇತ್ರದಲ್ಲಿ ನ್ಯಾಮತಿ ಹೊನ್ನಾಳಿ ಅವಳಿ ತಾಲೂಕುಗಳ ಅಲ್ಪಸಂಖ್ಯಾತರು ಪೂರ್ಣ ಬೆಂಬಲವ ನೀಡುವುದರ ಮೂಲಕ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಲಿಕ್ಕೆ ಸಹಕರಿಸಿದ್ದಾರೆ ಅವರುಗಳಿಗೆ ಅತ್ಯಂತ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಚೀಲೂರ್ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮುಸ್ಲಿಂ ಸಮುದಾಯದ ಮುಖಂಡ ವಾಜಿದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ ಜಿ ವಿಶ್ವನಾಥ್ ಬಿ ಸಿದ್ದಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್ ಎ ಉಮಾಪತಿ ಆಸ್ಕರ್ ಭಾಷಾ, ಇಬ್ರಾಹಿಂ (ಗುಂಡ) ಸಣ್ಣಕ್ಕಿ ಬಸವನಗೌಡ ನುಚ್ಚಿನು ವಾಗೇಶ್ ಕಲೀಲ್, ಜಬಿವುಲ್ಲಾ ,ಸೈಯದ್ ಸಮೀರ್ ಇನ್ನು ಹಲವಾರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಹ ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *