ಹೊನ್ನಾಳಿ,27: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್(ಎಐಟಿಯುಸಿ) ಹೊನ್ನಾಳಿ ತಾಲೂಕು ಘಟಕದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟಣದ ಕನಕ ರಂಗಮಂದಿರದಿಂದ ತಾಲೂಕು ಕಛೇರಿಯ ವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತ ಪ್ರತಿಟನೆ ನಡೆಸಿ ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ತಾಲೂಕು ಅಧ್ಯಕ್ಷೆ ಚನ್ನಮ್ಮ ಮಾತನಾಡಿ ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳಲ್ಲಿ 6ನೇ ಗ್ಯಾರಂಟಿಯಾದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರುಗಳಿಗೆ ಕ್ರಮವಾಗಿ ಮಾಸಿಕ 15 ಸಾವಿರ ಮತ್ತು 10 ಸಾವಿರ ಗೌರವಧನವನ್ನು ಹೆಚ್ಚಣ ಮಾಡಬೇಕು,ನಿವೃತ್ತರಿಗೆ 3 ಲಕ್ಷ ರೂ.ಗಳನ್ನು ಇಡಿಗಂಟನ್ನು ಜಾರಿಗೊಳಿಸಬೇಕು ಮಾಸಿಕ 5 ಸಾವಿರ ಪೆನ್ಷನ್ ಜಾರಿಗೊಳಿಸಬೇಕು ಬರುವ ಬಜಟ್‍ನಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿಸಬೇಕು ಎಂದು ಒತ್ತಾಯಿಸಿದರು.
ಗೌರವಧ್ಯಕ್ಷೆ ಕೆ.ಜಿ.ಗೀತಾ ಮಾತನಾಡಿ ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ನಮ್ಮನ್ನೂ ಬಳಿಸಿಕೊಳ್ಳುತ್ತಿರುವುದರಿಂದ ಅಂಗನವಾಡಿ ಕೇಂದ್ರಕ್ಕೆ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸದೆ ಕಾನ್ವೇಂಟ್‍ಗಳಿಗೆ ಕಳಿಸುತ್ತಾರೆ ಕಾರ್ಯಕರ್ತೆಯರು ಕೆಲಸ ಮಾಡಲ್ಲ ಎಂದು ಪೊಷಕರಿಗೆ ಅಂಗನವಾಡಿ ಬಗ್ಗೆ ತಾತ್ಸರ ಮನೋಭಾವನ ಬರುತ್ತದೆ ಇದರಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‍ಓ ಕೇಲಸ ಬೇಡವೇ ಬೇಡ,ಕುಟಂಬ ಸದಸ್ಯ ಸರ್ವೆ ಕಾರ್ಯವು ಸಹ ಬೇಡವೇ ಬೇಡ, ಮೊಟ್ಟ ಟೆಂಡರ್ ಬೇಡ ಎಂದು ವಿವಿಧ ಬೇಡಿಕೆಗಳ ಈಡೇರಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ವಿವಿಧ ಬೇಡಿಕೆ ಮತ್ತು ಮನವಿಯನ್ನು ಸ್ವೀಕರಿಸಿ ಮಾತನಾಡಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ ನಿಮ್ಮ ಸೇವೆ ಆಪಾರವಾದದು ಯಾವ ತಂದೆ-ತಾಯಿ ತಮ್ಮ ಮಕ್ಕಳನ್ನು ಪೋಷಣೆ ಮಾಡುವುದಿಲ್ಲ ನೀವು ಮಾಡುತ್ತಿರುವ ಸೇವೆ ಅನನ್ಯವಾದದು ಆದರೆ ನಿಮಗೆ ಕೆಲಸ ಹೆಚ್ಚು ವೇತನ ಕಡಿಮೆ, ವೇತನ ಹೆಚ್ಚಳಕ್ಕೆ ಸಂಭಂದಪಟ್ಟ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳ ಜೋತೆ ಮಾತನಾಡಿ ವೇತನ ಹೆಚ್ಚಳಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಫಡೆರೆಷನ್ ಉಪಾಧ್ಯಕ್ಷೆ ರೇಣುಕಮ್ಮ,ಕಾರ್ಯಧರ್ಶಿ ಎ.ಎಂ.ವಸಂತ,ಖಜಾಂಚಿ ಕೆ.ಹೆಚ್.ಶಾರದದೇವಿ,ಸರ್ಕಲ್ ಲೀಡರ್ಸ್ ಮಂಜುಳ,ಹಸೀನಾಬಾನು,ಕರಿಬಸಮ್ಮ,ಬಿ.ಅನುಸೂಯ,ಪೂರ್ಣಿಮಾ.ಬಿ.ವಿ.ಸವಿತಾ,ಆಶಾ,ಚಂದ್ರಮ್ಮ, ಕುರುವ ತಾಂಡದ ಟಿ.ಎನ್.ಲಲಿತ,ಚಂದ್ರಪ್ಪ ಸೇರಿದಂತೆ ನೂರಾರು ಕಾರ್ಯಕರ್ತೆಯರು ಇದ್ದರು.

Leave a Reply

Your email address will not be published. Required fields are marked *