ನ್ಯಾಮತಿ: ಪಕ್ಕದ ಸುರವೂನ್ನೇ ಗ್ರಾಮದ ಶ್ರೀ ಬಸವೇಶ್ವರ ಮಹಿಳಾ ಭಜನಾ ಸಂಘ ದೇವಿಕೊಪ್ಪ ಸುರವೂನ್ನೇ ಗ್ರಾಮದ ಸರ್ವ ಸದ್ಭಭಕ್ತರು ಆಯೋಜಿಸಿರುವ ಲಿಂಗೈಕ ಷ//ಬ್ರ// ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮಿಗಳವರ 2ನೇ ಪುಣ್ಯ ಸ್ಮರಣೆಯನ್ನು ಹಮ್ಮಿಕೊಳ್ಳಲಾಯಿತು.
ಶ್ರೀ ಶ್ರೀ ಶಿವಕುಮಾರ ಹಾಲಸ್ವಾಮಿಗಳು ಬೃಹನ್ ಮಠ ರಾಂಪುರ ಅಧ್ಯಕ್ಷತೆ ವಹಿಸಿ ಇವರ ದಿವ್ಯ ಸಾನಿಧ್ಯದಲ್ಲಿ ಧರ್ಮಸಭೆಯನ್ನು ನಡೆಸಿದ ನಂತರ ಅವರು ಭಕ್ತರ ಕುರಿತು ಆಶೀರ್ವಚನ ನೀಡುತ್ತಾ ಕುದುರೆ ಮರಿ ಕಳೆದಿದೆ ಎಂದು ಹಾಲಸ್ವಾಮಿ ಮಠಕ್ಕೆ ಭಕ್ತನ ಬಂಧು ಗುರುಗಳ ಹತ್ತಿರ ಹೇಳಿಕೊಂಡಾಗ ಊರಿನ ಹೊರಗಡೆ ಆಡುತ್ತಿದೆ ಎಂದು ಹಾಲಸ್ವಾಮಿ ಶ್ರೀಗಳು ಭಕ್ತನಿಗೆ ಹೇಳಿದಾಗ ಭಕ್ತನು ತನ್ನ ಕುದುರೆಮರೆಯನ್ನೇ ಮಠಕ್ಕೆ ಬಿಟ್ಟು ಹೋದನು ಎಂದು ಧರ್ಮಸಭೆಯಲ್ಲಿ ಭಕ್ತರ ಕುರಿತು ಹೇಳಿದರು. ಇದರ ಅರ್ಥ ವಿಶ್ವೇಶ್ವರ ಸ್ವಾಮೀಜಿಗಳು ನನ್ನ ಸಹೋದರ ಅವರನ್ನು ಕಳೆದುಕೊಂಡಿದ್ದು ಬಹಳ ದುಃಖ ಕಾಡುತ್ತಿದೆ, ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ ವಿನಹ ಅವರುಗಳು ಭಕ್ತರ ಮನಸ್ಸಿನಲ್ಲಿ ಅಜರಾಮರವಾಗಿದ್ದಾರೆ ಕಂಬನಿ ನುಡಿದರು. ಅವರ ಭಕ್ತರು ಸುರವೂನೇ ಗ್ರಾಮದಲ್ಲಿ ಬಸವೇಶ್ವರ ಮಹಿಳಾ ಭಜನಾ ಮಂಡಳಿಯವರು ಪುಣ್ಯ ಸ್ಮರಣೆಯನ್ನು ಮಾಡಿ ಅವರ ಸವಿನೆನಪಿಗೆ ಅನ್ನ ಸಂತರ್ಪಣೆ ಮಾಡುತ್ತಿರುವುದು ಶ್ಲಾಘನೀಯ. ವಿಶ್ವೇಶ್ವರ ಹಾಲೇಶ್ವರರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಕ್ತರಿಗೆ ಆಶೀರ್ವದಿಸಿದರು.
ಶ್ರೀ ಬಸವೇಶ್ವರ ಮಹಿಳಾ ಭಜನಾ ಸಂಘದ ವತಿಯಿಂದ ಸಂಗೀತ ಗಾನಸುದೆಯನ್ನು ಉಣಬಡಿಸಿದರು. ಶ್ರೀ ಬಸವೇಶ್ವರ ಮಹಿಳಾ ಭಜನಾ ಸಂಘದ ಅಧ್ಯಕ್ಷರಾದ ವೀಣಾ ಬಿ ವಿ. ಕಾರ್ಯದರ್ಶಿ ಭಾರತೀ. ಕವಿತಾ ,ಕಮಲಮ್ಮ, ಮೀನಾಕ್ಷಮ್ಮ ,ಹಾರ್ಮೋನಿಯಂ ವಿರೂಪಾಕ್ಷಪ್ಪ, ತಬಲ ವಾದಕ ವೀರಭದ್ರಪ್ಪ ಗ್ರಾಮದ ಮುಖಂಡರಾದ ಚಂದ್ರಶೇಖರಪ್ಪ ಗೌಡ್ರು ಸುರವೂನ್ನೇ ಗ್ರಾಮದ ಸರ್ವ ಭಕ್ತಾದಿಗಳು ಸಹ ಉಪಸ್ಥಿತಿಯಲ್ಲಿದ್ದರು.