ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ 36 ರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಜೂನ್ 29 ರಂದು ಬೆಳಿಗ್ಗೆ 10.30 ಗಂಟೆಗೆ ಸಾಂಖ್ಯಿಕ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಸಾಂಖ್ಯಿಕ ತಜ್ಞರಾದ ದಿವಂಗತ ಪ್ರೊ. ಪಿ.ಸಿ. ಮಹಾಲನೋಬಿಸ್ ಜನ್ಮ ದಿನವಾದ ಜೂನ್ 29 ರಂದು ಸಾಂಖ್ಯಿಕ ದಿನಾಚರಣೆಯನ್ನಾಗಿ ಆಚರಿಸಲು ಸರ್ಕಾರ ನಿರ್ದೇಶಿಸಿದ್ದು, ಸಾಮಾಜಿಕ ಆರ್ಥಿಕ ಯೋಜನೆ ಮತ್ತು ನೀತಿ ನಿರೂಪಣೆಯಲ್ಲಿ ಅಂಕಿ ಅಂಶಗಳ ಪಾತ್ರದ ಬಗ್ಗೆ ಅವರಿಂದ ಸ್ಪೂರ್ತಿ ಪಡೆಯಲು ಹಾಗೂ ಯುವ ಪೀಳಿಗೆಯಲ್ಲಿ ವಿಶೇಷವಾಗಿ ಸಾರ್ವಜನಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಸಕ್ತ ಸಾಲಿನ ಸಾಂಖ್ಯಿಕ ದಿನಾಚರಣೆಯಂದು “ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಸೂಚಕ ಚೌಕಟ್ಟಿನೊಂದಿಗೆ ರಾಜ್ಯ ಸೂಚಕ ಚೌಕಟ್ಟಿನ ಜೋಡಣೆ” ಎಂಬ ವಿಷಯಗಳ ಕುರಿತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.