ನ್ಯಾಮತಿ: ಪಟ್ಟಣ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಗ್ಗಟ್ಟುಗಳಿಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನೇತೃತ್ವದ ತಂಡ ದಿಡೀರ್ ಭೇಟಿ ನೀಡಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ನಡೆಸಲಾಯಿತು. ದಿನಸಿಅಂಗಡಿ, ಹೋಟೆಲ್ ಸ್ಟೇಷನರಿ, ಬಟ್ಟೆ ಅಂಗಡಿಗಳಿಗೆ ದಿಢೀರನೆ ಭೇಟಿ ನೀಡಿದ ಮುಖ್ಯಾಧಿಕಾರಿ ಗಣೇಶರಾವ್ ಪಿ ನಂತರ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಿದ್ದರೂ ಸಹ ದೊಡ್ಡ ದೊಡ್ಡ ಅಂಗಡಿಯ ಮಾಲೀಕರು ಮತ್ತು ಬೀದಿ ವ್ಯಾಪಾರಿಗಳು ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಸ್ಪೂನ್ ಇನ್ನು ಮುಂತಾದ ದೇಹಕ್ಕೆ ಮಾರಕವಾಗಿರುವಂತಹ ಇಂತಹ ಪ್ಲಾಸ್ಟಿಕ್ ಸಂಗ್ರಹ ಮತ್ತು ಮಾರಾಟ ಮಾಡಿದ್ದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಂತಹ ಅಂಗಡಿಗೆ ದಿಡೀರ್ ಭೇಟಿ ನೀಡಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡವನ್ನು ವಿಧಿಸಲಾಯಿತು ಎಂದು ತಿಳಿಸಿ ಇನ್ನು ಮುಂದೆ ಪದೇಪದೇ ಒಂದು ಎರಡು ಮೂರು ಬಾರಿ ಇಂಥ ಏಕ ಬಳಕೆಯ ಪ್ಲಾಸ್ಟಿಕ್ ಅಂಗಡಿಗಳಲ್ಲಿ ಸಂಗ್ರಹಿಸಿದ್ದಲ್ಲಿ ಅಂತಹ ಅಂಗಡಿಗಳಿಗೆ ಕ್ರಿಮಿನಲ್ ಕೇಸ್ ದಾಖಲಿಸಿ ಅಂಗಡಿ ಮುಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸೇರಿದಂತೆ ಆರೋಗ್ಯ ನಿರೀಕ್ಷಕ ಹರ್ಷವರ್ಧನ್ ರಾಜಪ್ಪ ಪ್ರಶಾಂತ್ ಹನುಮಂತಪ್ಪ ಇನ್ನು ಮುಂತಾದ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.