ಅಂತ್ಯೋದಯ ಅನ್ನಯೋಜನೆ (ಎಎವೈ) ಮತ್ತು ಆದ್ಯತಾ(ಪಿ.ಹೆಚ್.ಹೆಚ್) ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಮುಖ್ಯಸ್ಥರ ಬ್ಯಾಂಕ್‍ಖಾತೆಗೆ ಆಃಖಿ ಮೂಲಕ ಹಣ ಪಾವತಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
 ಸರ್ಕಾರದ ಆದೇಶದನ್ವಯ ಅಧ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ 05 ಕೆ.ಜಿ ಅಕ್ಕಿ ವಿತರಿಸಲು ಉದ್ದೇಶಿಸಲಾಗಿದ್ದು, 05 ಕೆ.ಜಿ ಅಕ್ಕಿಯ ಬದಲಾಗಿ ಪಡಿತರ ಚೀಟಿ ಕುಟುಂಬದಲ್ಲಿನ ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿಗೆ ರೂ. 34 ರಂತೆ ಪ್ರತಿ ಸದಸ್ಯರಿಗೆ ರೂ.170 ರಂತೆ ಪಡಿತರ ಕುಟುಬಂದ ಮುಖ್ಯಸ್ಥರ ಖಾತೆಗೆ ನಗದು ವರ್ಗಾವಣೆ ಮಾಡಲಾತ್ತಿದ್ದು, ಕಳೆದ ಮೂರು ತಿಂಗಳಲ್ಲಿ ಪಡಿತರ ಆಹಾರ ಧಾನ್ಯವನ್ನು ಪಡೆದುಕೊಂಡಿರುವ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿದ್ದು, ಪಡಿತರ ಆಹಾರಧಾನ್ಯವನ್ನು ಪಡೆಯದೆ ಇರುವವರು  ಯೋಜನೆಗೆ ಅರ್ಹರಿರುವುದಿಲ್ಲ.
 ಜಿಲ್ಲೆಯಲ್ಲಿ ಒಟ್ಟು 42,258 ಪಡಿತರ ಚೀಟಿಗಳಲ್ಲಿ ಕುಟುಂಬದ ಮುಖ್ಯಸ್ಥರು ಸಕ್ರಿಯ ಬ್ಯಾಂಕ್‍ಖಾತೆಯನ್ನು ಹೊಂದಿರುವುದಿಲ್ಲ, ಕೆಲವರು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಿರುವುದಿಲ್ಲ, ಇನ್ನೂ ಕೆಲವರು ಬ್ಯಾಂಕ್ ಖಾತೆಯನ್ನು ತೆರೆದಿರುವುದಿಲ್ಲ ಹಾಗೂ ಬ್ಯಾಂಕ್ ಇಞಥಿಛಿ ಮಾಡಿಸಿರುವುದಿಲ್ಲ ಆದ್ದರಿಂದ  ಚಾಲ್ತಿಯಲ್ಲಿರುವ ಬ್ಯಾಂಕ್‍ಖಾತೆಯ ಮಾಹಿತಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿದ ನಂತರ ಹಾಗೂ ಇದುವರೆಗೂ ಕುಟುಂಬದ ಮುಖ್ಯಸ್ಥರು ಸಕ್ರಿಯ ಬ್ಯಾಂಕ್‍ಖಾತೆ ಹೊಂದಿಲ್ಲದಿದ್ದರೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಖಾತೆಯನ್ನು ತೆರೆದರೆ ಮುಂದಿನ ಮಾಹೆಯ ಯೋಜನೆಗೆ ಅರ್ಹರಾಗಿರುತ್ತಾರೆ.  ಆದ್ದರಿಂದ ಪಡಿತರ ಚೀಟಿದಾರರು ಸಮಿಪದ ಅಂಚೆ ಕಛೇರಿಗಳಲ್ಲಿ ಜುಲೈ 20 ರೊಳಗಾಗಿ ಐ.ಪಿ.ಪಿ.ಬಿ ಖಾತೆ ತೆರೆಯುವ ಮೂಲಕ ಸರಳವಾಗಿ ನಗದು ವರ್ಗಾವಣೆ ಸೌಲಭ್ಯ ಪಡೆಯಬಹುದು
ನಗದು ವರ್ಗಾವಣೆ ಸೌಲಭ್ಯ (ಆಃಖಿ)ಯ ಪ್ರಥಮ ಹಂತದ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಪಡಿತರಚೀಟಿದಾರರಲ್ಲಿ ಬಹುತೇಕ ಬ್ಯಾಂಕ್‍ಖಾತೆ ವಿವರಗಳಿಗೆ ಸಂಬಂಧಿಸಿರುವುದರಿಂದ ಅಂತವರುತಮ್ಮ ಬ್ಯಾಂಕ್‍ಗಳಿಗೆ ಭೇಟಿ ನೀಡಿ ಶೀಘ್ರವಾಗಿ ಖಾತೆಗಳನ್ನು ಸರಿಪಡಿಸಿಕೊಳ್ಳಲು ತಿಳಿಸಿದೆ”
ಹಣ ವರ್ಗಾವಣೆಯಾದ ಕುರಿತು ಹಾಗೂ ಇತರ ವಿವರಗಳನ್ನು hಣಣಠಿs://ಚಿhಚಿಡಿಚಿ.ಞಚಿಡಿ.ಟಿiಛಿ.iಟಿ/sಣಚಿಣus2/sಣಚಿಣus_oಜಿ_ಜbಣ.ಚಿsಠಿx ಪಡೆಯಬಹುದು  ಹಾಗೂ ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗಳನ್ನು/ತಾಲ್ಲೂಕು ಕಛೇರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *