ಹೊನ್ನಾಳಿ:- ಜುಲೈ- 16 ಪಟ್ಟಣದಲ್ಲಿರುವ ಟಿಎಪಿಸಿಎಂಎಸ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಎ ಜಿ ಗಣೇಶ್ ಅವಿರೋಧ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಗಜೇಂದ್ರಪ್ಪ ಮಾಸಡಿ ಅವರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಭಾನುವಾರ ಚುನಾವಣಾ ಪ್ರಕ್ರಿಯೆ ಅಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಈ ಅಧ್ಯಕ್ಷರ ಗಾದೆಗೆ ಎ ಜಿ ಗಣೇಶಪ್ಪ ಹೊರತುಪಡಿಸಿ ಬೇರೆ ಯಾವ ನಿರ್ದೇಶಕರು ಸಹ ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷರ ಗಾದೆಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ಘೋಷಣೆ ಮಾಡಿದರು. ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರು ಹಾಗೂ ಶಾಸಕ ಡಿ ಜಿ ಶಾಂತನಗೌಡ್ರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಡಿ ಎಸ್ ಸುರೇಂದ್ರ ಗೌಡ, ಶಿವಮ್ಯೂಲ್ ನಿರ್ದೇಶಕ ಹನುಮನಳ್ಳಿ ಬಸವರಾಜಪ್ಪ, ಟಿ ಎ ಪಿ ಸಿ ಎಂ ಎಸ್ ಉಪಾಧ್ಯಕ್ಷ ವಿಶಾಲಾಕ್ಷಿ ಮಲ್ಲಿಕಾರ್ಜುನ…ನಿರ್ದೇಶಕರಾದ ಟಿ ಮಲ್ಲೇಶಪ್ಪ, ಬಸವರಾಜಪ್ಪ, ನಾಗಮ್ಮ, ಮಂಜುನಾಥ್, ಅನಿಲ್ ಎಚ್ ಬಸವರಾಜಪ್ಪ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ, ಸೊಸೈಟಿ ಕಾರ್ಯದರ್ಶಿ, ಜಿಎಂ ಮುರುಗೇಶ್, ಗೋಪಿ, ಸುರೇಶ್ ಸೇರಿದಂತೆ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.