ಮಳೆಗಾಲದಲ್ಲಿ ಶೀತ, ಜ್ವರ, ಕೆಮ್ಮು ಬರುವುದು ಸಾಮಾನ್ಯವಾಗಿದ್ದು ಜನರು ಮನೆಮದ್ದನ್ನೆ ಬಳಸಿ ಗುಣಪಡಿಸಿಕೊಳ್ಳಬಹುದು ಎಂದು ದಾವಣಗೆರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ ಪಿ. ಪಟಗೆ ತಿಳಿಸಿದರು.
ಗುರುವಾರ ದಾವಣಗೆರೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ವಸತಿ ನಿಲಯ ಪಾಲಕರಿಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆರೋಗ್ಯಇಲಾಖೆಯಿಂದ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು ಈಗ ಮಳೆಗಾಲವಾಗಿರುವುದರಿಂದ ಶೀತ ಜ್ವರ, ಕೆಮ್ಮಿನ ಪ್ರಕರಣಗಳೂ ಹೆಚ್ಚಾಗುತ್ತಿವೆ. ಹಾಗೂ ಮುದ್ರಾಸ್ ಐ ಪ್ರಕರಣಗಳೂ ಬಹಳ ಕಂಡು ಬರುತ್ತಿದ್ದು ಜನರು ಭಯ ಪಡಬೇಕಾಗಿಲ್ಲ ಎಂದರು.
ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್. ಉಮಾಪತಿ, ಡಾ. ಸ್ನೇಹಾ ಪಿ ನಾಯ್ಕ್, ಹಾಲಸ್ವಾಮಿ .ಎನ್.ಸಿ, ತಂಬಾಕು ನಿಯಂತ್ರಣಾಘಟಕದ ದೇವರಾಜ ಉಪಸ್ಥಿತರಿದ್ದರು.