ನ್ಯಾಮತಿ: ತಾಲೂಕು ಗೋವಿನ ಕೋವಿ ಗ್ರಾಮದಲ್ಲಿ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ ಜೆ ಜೀನಹಳ್ಳಿಯವರು ಇಂದು ವಯೊ ನಿವೃತ್ತಿ ಹೊಂದಿದರು. ಕೆ ಜೆ ಜೀನಹಳ್ಳಿ ಅವರು ವಯೊ ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಶ್ರೀಯುತರಿಗೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಪೆÇೀಷಕರ ವರ್ಗದವರ ವತಿಯಿಂದ ಬೀಳ್ಕೊಡುಗೆ ಹಾಗೂ ಅಭಿನಂದನೆಯನ್ನು ಸಲ್ಲಿಸಿದರು. ಅಭಿನಂದನೆ ಸ್ವೀಕರಿಸಿ ನಂತರ ಮಾತನಾಡಿದ ಅವರು ನನಗೆ ನಿವೃತ್ತಿಯಾಗಿದೆ ಎಂದು ಬೇಜಾರಿಲ್ಲ ಆದರೆ ಗೋವಿಕೋವಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ನನ್ನ ಸಂಬಂಧ ಪ್ರೀತಿ ವಿಶ್ವಾಸ ಗಟ್ಟಿತನದಿಂದ ಕೂಡಿತ್ತು ಆ ಪ್ರೀತಿ ಇನ್ನು ಮುಂದೆ ಸಿಗುವುದಿಲ್ಲ ಎನ್ನುವುದು ನನಗೆ ಕಾಡುತ್ತಿದೆ ಎಂದು ಭಾವುಕರಾದರು.
ಅಧ್ಯಕ್ಷತೆ ಮಲ್ಲೇಶ್ ವಹಿಸಿದ್ದರು.
ಸ್ವಾಗತ ಭಾಷಣವನ್ನು ಮಲ್ಲಿಕಾರ್ಜುನ್ ನಡೆಸಿಕೊಟ್ಟರು.
ನಿರೂಪಣೆಯನ್ನು ರಮೇಶ್ ಪಿ ನಡಸಿಕೊಟ್ಟರು.
ವಂದನಾರ್ಪಣೆಯನ್ನು ಹರೀಶ್ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಡಿಎಸ್ ಪ್ರದೀಪ್ ಗೌಡ್ರು ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜ, ಸಂಪನ್ಮೂಲ ಅಧಿಕಾರಿಯ ತಿಪ್ಪೇಶಪ್ಪ, ದೈಹಿಕ ಶಿಕ್ಷಣಾಧಿಕಾರಿ ಈಶ್ವರಪ್ಪ,ಮುಖ್ಯೋಪಾಧ್ಯಯರಾದ ಶ್ರೀಮತಿ ಲೀಲಾ ವಿ ಎಚ್ ರುದ್ರೇಶ್ ಕರಬಸಪ್ಪ ಆಚಾರ್, ರಮೇಶ್, ಸುನಿತಾ, ಗೌರಮ್ಮ ಎಲ್ಲಾ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಊರಿನ ಗ್ರಾಮಸ್ಥರು ಸಹ ಉಪಸ್ಥಿತಿಯಲ್ಲಿದ್ದರು.