ನ್ಯಾಮತಿ: ತಾಲೂಕ ಕಚೇರಿ, ಆವರಣದಲ್ಲಿ ಇಂದು ತಶಿಲ್ದಾರ್ ಆರ್ ವಿ ಕಟ್ಟಿಯವರ ನೇತೃತ್ವದಲ್ಲಿ ಆಗಸ್ಟ್ 15ರಂದು 76ನೆಯ ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ಪೂರ್ವಭಾವಿ ಸಭೆ ನಡೆಸಿದರು.
ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವ ವಹಿಸಿ ತಹಸಿಲ್ದಾರ್ ಆರ ವಿ ಕಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲಾಧಿಕಾರಿ ವೆಂಕಟೇಶ ಎಂವಿ ಅವರ ಆದೇಶದ ಹಿನ್ನೆಲೆಯಲ್ಲಿ 76ನೇ ವರ್ಷದ ಸ್ವತಂತ್ರ ದಿನಾಚರಣೆಯನ್ನು ಆಗಸ್ಟ್ 15ರಂದು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದ ಹಿನ್ನೆಲೆಯಲ್ಲಿ ಇಂದು ತಾಲೂಕು ಮಟ್ಟದ ಅಧಿಕಾರಿಗಳನ್ನು ಸಭೆ ಕರೆದು ಅವರ ಸಲಹೆ ಸಹಕಾರವನ್ನು ಪಡೆದುಕೊಂಡು ಅಂದು ಕಟ್ಟುನಿಟ್ಟಾಗಿ, ಶ್ರದ್ಧಾಭಕ್ತಿಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಸಾಕಾರದೊಂದಿಗೆ ಹಾಗೂ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ ಎಂದು ತಿಳಿಸಿದರು .ಈ ಸಂದರ್ಭದಲ್ಲಿ ಗ್ರೇಡ್ 2 ತಹಸಿಲ್ದಾರ್ ಗೋವಿಂದಪ್ಪ, ಇಇ ಓ ಕರಿಬಸಪ್ಪ, ಪಂ ಪಂ ಮುಖ್ಯಾಧಿಕಾರಿ ಗಣೇಶರಾವ್ ಪಿ, ಪಿ ಎಸ್ ಐ ಪಿ ಎಸ್ ರಮೇಶ್ ಕ್ಷೇತ್ರ ಶಿಕ್ಷಣಾಧಿಕಾರಿ ನಂಜುರಾಜ್ ಟಿ ಎಚ್ ಓ ಕೆಂಚಪ್ಪ, ಸಿಡಿಪಿಒ ಮಹಾಂತ ಸ್ವಾಮಿ ಪೂಜಾರ ,ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನೌಕರ ‌ಸಿಬ್ಬಂದಿ ವರ್ಗದವರು ಸಹ ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *