ಹೊನ್ನಾಳಿ: ಪಟ್ಟಣದ ವಾಸಿ ಫೋಟೋ ಗ್ರಾಫರ್ ಬಸನಗೌಡ ಶ್ರೀಮತಿ ಸುಮಾ ದಂಪತಿಯ ಮಗಳು ಕ್ರಿಷಾಳ ಹುಟ್ಟುಹಬ್ಬ ಆಚರಣೆಯನ್ನು ಅಂಬೇಡ್ಕರ್ ಭವನದಲ್ಲಿರುವ ಅರುಣೋದಯ ಶಿಕ್ಷಣ ಸಂಸ್ಥೆಯ ಅಂಗವಾದ ಶ್ರೀ ಮಂಜುನಾಥೇಶ್ವರ ವಿಶೇಷ ಬುದ್ಧಿಮಾಂದ್ಯ ಮಕ್ಕಳ ಜೊತೆಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು.
ಫೋಟೋಗ್ರಾಫರ್ ಬಸನಗೌಡರ ಜೊತೆ ಎಬಿಸಿ ನ್ಯೂಸ್ ಅರವಿಂದ್ ಎಸ್ ಅವರು ಅವರ ಜೊತೆ ಸಂದರ್ಶಿಸಿದಾಗ ನೀವು ಒಬ್ಬ ಫೋಟೋಗ್ರಾಫರ್ ಅಂದ ಮಕ್ಕಳ ಜೊತೆ ತಮ್ಮ ಮಗಳ ಹುಟ್ಟುಹಬ್ಬವನ್ನ ಏಕೆ ಆಚರಿಸುತ್ತೀರಿ ಎಂದು ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ, ನಾನು ಒಬ್ಬ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದೇನೆ, ನನ್ನ ಬದುಕಿಗೆ ಫೋಟೋಗ್ರಾಫರ್ ವೃತ್ತಿಯನ್ನು ನಡೆಸಿಕೊಂಡು ಹೋಗುತ್ತಿದ್ದೇನೆ. ಆದರೆ ಈಗಿನ ಕಲಿಯುಗದಲ್ಲಿ ಶ್ರೀಮಂತರು ಹುಟ್ಟಿದ ಹಬ್ಬವನ್ನು ದುಂದು ವೆಚ್ಚಮಾಡಿ ರೋಡಿನಲ್ಲಿ ಕಾರಿನಲ್ಲಿ ಬೈಕಿನ ಮೇಲೆ ಕೆಕ ಕತ್ತರಿಸಿ ಹುಟ್ಟುಹಬ್ಬ ಆಚರಿಸುತ್ತಾರೆ ಆದರೆ ಬಡ ಕುಟುಂಬಕ್ಕೆ ಸೇರಿದ ಕೆಳವರ್ಗದ ಸಮುದಾಯದವರು ಇರಬಹುದು, ಮೇಲ್ಜಾತಿಯ ವರ್ಗದವರು ಇರಬಹುದು, ತಂದೆ ತಾಯಿ ಇಲ್ಲದೆ ಇಂತಹ, ಕಣ್ಣು ಕಾಣದೆ, ಕಿವಿ ಕೇಳದೆ, ಕೈ ಕಾಲು ಸರಿ ಇಲ್ಲದೆ ಇರುವಂತಹ ಅನಾಥ ಮಕ್ಕಳಿಗೆ ಹುಟ್ಟು ಹಬ್ಬ ಆಚರಿಸಬೇಕೆನ್ನುವುದು ಅವರಿಗೆ ಅರುವಿರುವುದಿಲ್ಲ ಹಾಗಾಗಿ ನನಗೆ ಅನಿಸಿದ್ದು ನನ್ನ ಮಗಳ ಹುಟ್ಟುಹಬ್ಬವನ್ನ ಈ ಅಂದ ಮಕ್ಕಳ ಜೊತೆ ಆಚರಿಸಿದರೆ ನನ್ನ ಮಗಳಿಗೆ ಸಂತೋಷ ಪುಣ್ಯಪ್ರಾಪ್ತಿ ಸಿಗಬಹುದು ಎಂದು ಅದರ ಜೊತೆಗೆ ಆ ಅಂದ ಮಕ್ಕಳಲ್ಲಿ ದೇವರನ್ನು ಕಾಣಬಹುದು ಎಂದು ಅವರ ಅನಿಸಿಕೆ ತಿಳಿಸಿದರು. ಇವರ ಮಗಳ ಹುಟ್ಟುಹಬ್ಬಕ್ಕೆ ಅಂದ ಮಕ್ಕಳಗಳಿಗೆ ಕರಿಗೇಡು, ಕೋಸಂಬರಿ ಪಲ್ಯ ಅನ್ನ ಸಾಂಬಾರು ಊಟದ ವ್ಯವಸ್ಥೆಯನ್ನು ಮಾಡಿಸಿ ಅಂದ ಮಕ್ಕಳಿಗಳಿಗೆ ಕುಟುಂಬ ಸಮೇತವಾಗಿ ಊಟ ಬಡಿಸಿ ಕುಟುಂಬ ಸಮೇತವಾಗಿ ಅಲ್ಲೇ ಊಟವನ್ನು ಮಾಡಿದ್ದು ಕೂಡ ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಗಿರಿಜಮ್ಮ ಭಾಗ್ಯ, ಕಿರಣ್, ರಮೇಶ್, ದಯಾನಾಯ್ಕ, ವಿಜಯ್, ಹರೀಶ್, ಕೀರ್ತಿ ಡಿಜಿಟಲ್ ಸುರೇಶ್ ಅಂದ ಮಕ್ಕಳ ಶಿಕ್ಷಕಿಯಾದ ಎಂ ಹೆಚ್ ವೀಣಾ ಹಾಗೂ ಅವರ ಸಿಬ್ಬಂದಿ ವರ್ಗದವರು ಸಹ ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *