ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿ ರವರಿಗೆ ಗುಜರಾತ್ ಹೈ ಕೋರ್ಟ್ ಅನರ್ಹತೆಯ ಪರ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿರುವ ಹಿನ್ನೆಲೆಯಲ್ಲಿ ಆಗಸ್ಟ್ 4 ಶುಕ್ರವಾರ ಮಧ್ಯಾಹ್ನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಬಳಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಲಾಯಿತು,
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಭವನದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ ಶ್ರೀ ರಾಹುಲ್ ಗಾಂಧಿ ಜಿಂದಾಬಾದ್ ಎಂಬ ಘೋಷಣೆ ಕೂಗಿ ರಾಹುಲ್ ಗಾಂಧಿ ರವರಿಗೆ ನೈತಿಕ ಬೆಂಬಲವನ್ನ ಇದೇ ಸಂದರ್ಭದಲ್ಲಿ ಕಾರ್ಯಕರ್ತರಿಂದ ವ್ಯಕ್ತಪಡಿಸಲಾಯಿತು,

ದೇಶದ ಜನರ ಬೆಂಬಲವಿದೆ ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ ಅದಕ್ಕಾಗಿ ರಾಹುಲ್ ಗಾಂಧಿರವರು ಪ್ರಮಾಣ ಪತ್ರದಲ್ಲಿ ನಾನು ನ್ಯಾಯಾಲಯಕ್ಕೆ ತಲೆಬಾಗುತ್ತೇನೆ ಎಂದು ಸುಪ್ರೀಂ ಕೋರ್ಟನಲ್ಲಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು,

ಇಂದು ಸರ್ವೋಚ್ಚ ನ್ಯಾಯಾಲಯ ರಾಹುಲ್ ಗಾಂಧಿ ರವರ ಮನವಿಯನ್ನು ಪುರಸ್ಕರಿಸಿ ಆದೇಶಕ್ಕೆ
ತಡೆಯಾಜ್ಞ ನೀಡಿದೆ
ನ್ಯಾಯಾಲಯದ ತೀರ್ಪಿಗೆ ನಾವೆಲ್ಲರೂ ತಲೆಬಾಗುತ್ತೇವೆ,

ನ್ಯಾಯಾಂಗದ ವ್ಯವಸ್ಥೆ ಮೇಲೆ ನಂಬಿಕೆ ಇರುವ ನಾವೆಲ್ಲರೂ ಸಂವಿಧಾನದ ಹಾಗೂ ನ್ಯಾಯಾಂಗದ ತೀರ್ಪನ್ನು ಸ್ವಾಗತಿಸುತ್ತೇವೆ,

ರಾಹುಲ್ ಗಾಂಧಿ ರವರ ಪರ ನ್ಯಾಯಾಂಗ ನೀಡಿದ ತೀರ್ಪಿಗೆ ಹಾಗೂ ದೇಶದ ಜನ ನೀಡಿದ ಬೆಂಬಲಕ್ಕೆ ನಾವು ಇಂದು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.
ಈ ಸಂಭ್ರಮಾಚರಣೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಜಿ. ಜನಾರ್ಧನ್ ಎ.ಆನಂದ,
ಜಿ.ಪ್ರಕಾಶ್.ಹೇಮಾರಾಜ್, ಚಂದ್ರಶೇಖರ್,ಈ ಶೇಖರ್,, ಪುಟ್ಟರಾಜು,ಸುಧಾಕರ, ಪರಿಸರ ರಾಮಕೃಷ್ಣ,ಉಮೇಶ್, ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು,

Leave a Reply

Your email address will not be published. Required fields are marked *