ನಗರ ವ್ಯಾಪ್ತಿಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಮಂಜೂರಾಗಿದ್ದು, ನಿಲಯ ನಡೆಸಲು 900 ಚದರ ಮೀಟರ್ ವಿಸ್ತೀರ್ಣವುಳ್ಳ ಮೂಲಭೂತ ಸೌಲಭ್ಯವಿರುವ ಸುಸಜ್ಜಿತವಾದ ಕಟ್ಟಡದ ಮಾಲೀಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಕಟ್ಟಡದ ಮಾಲೀಕರು ಆಗಸ್ಟ್ 25 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ಕಲ್ಯಾಣಾಧಿಕಾರಿ ಜಿ. ಮಲ್ಲಿಕಾರ್ಜುನಪ್ಪ(ಹೊಸ ರಿಂಗ್ ರಸ್ತೆ), ಶ್ರೀಮತಿ ರತ್ನಮ್ಮ ತೆಲಗಿ ಸಿದ್ದೇಶ್ ರೆಸಿಡೆನ್ಸಿಯಲ್ ಲೇಔಟ್, ಶ್ರೀ ದೇವರಾಜ ಅರಸು ಭವನ ಇವರನ್ನು ಸಂಪರ್ಕಿಸಲು ತಾಲ್ಲೂಕು ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.