ನ್ಯಾಮತಿ : ತಾಲೂಕಿನ ಕುಂಕುವ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಮಂಜುನಾಥ್ ವಿ ಅಧ್ಯಕ್ಷರಾಗಿ, ಶೃತಿ ರುದ್ರೇಶ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಆಯ್ಕೆಯಾದ ನಂತರ ಕುಂಕುವ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ರೇಣುಕಾಚಾರ್ಯ ನೂತನ ಅಧ್ಯಕ್ಷರು ಹಾಗೂ ಉಪಾರ್ಧಯಕ್ಷರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ ಬೇಕೆಂದರು.
ಅಧಿಕಾರ ಇಂದು ಇರುತ್ತದೆ ನಾಳೆ ಹೋಗುತ್ತದೇ ಆದರೆ ನಾವು ಮಾಡಿದ ಕೆಲಸಗಳು ಮಾತ್ರ ನಮ್ಮ ಜೊತೆ ಇರುತ್ತೇವೆ ಇದನ್ನು ಗಮನದಲ್ಲಿಟ್ಟು ಕೊಂಡು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕೆಲಸ ಮಾಡುವಂತೆ ಕಿವಿ ಮಾತು ಹೇಳಿದರು.
ಈ ಸಂದರ್ಭ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ತಾಂಡತಾಭಿವೃದ್ದಿ ನಿಗಮದ ಮಾಜಿ ನಿದೇರ್ಶಕ ಮಾರುತಿ ನಾಯ್ಕ, ಎಪಿಎಂಸಿ ಸದಸ್ಯರ ಹನುಮಂತಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ರುದ್ರೇಶ್, ಸದಸ್ಯರಾದ ಕೆ.ಟಿ.ಬಸವರಾಜ್, ಚಂದನ್ ಮುಖಂಡರಾದ ಸುನೀಲ್, ಮಹೇಶ್ ಸೇರಿದಂತೆ ಮತ್ತೀತತರರಿದ್ದರು.

Leave a Reply

Your email address will not be published. Required fields are marked *