ನ್ಯಾಮತಿ:ತಾಲ್ಲೂಕಿನ ಕುಂಕುವ ಗ್ರಾಮದ ರೈತಯುವಕ ಸಾಲದ ಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಗ್ರಾಮದ ನರಸಿಂಹಪ್ಪ (38) ಆತ್ಮಹತ್ಯೆ ಮಾಡಿಕೊಂಡ ಯುವಕ.ಜಮೀನು ಮತ್ತುಕುಟುಂಬ ನಿರ್ವಹಣೆಗಾಗಿ ಕೃಷಿ ಉತ್ಪನ್ನ ಸಹಕಾರ ಸಂಘದಲ್ಲಿ 1ಲಕ್ಷ ಮತ್ತು ಖಾಸಗಿಯವರಿಂದ ಕೈಗಡವಾಗಿ 2ಲಕ್ಷ ಸಾಲ ಮಾಡಿದ್ದು. ಬೆಳೆ ನಷ್ಟದಿಂದ ಅದನ್ನು ತೀರಿಸಲು ಸಾಧ್ಯವಾಗದೆ ಮನನೊಂದು ಮನೆಯ ಕೊಠಡಿಯಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಸವಿತಾ ಅವರು ನ್ಯಾಮತಿ ಪೊಲೀಸರಿಗೆದೂರು ನೀಡಿದ್ದಾರೆ.

Leave a Reply

Your email address will not be published. Required fields are marked *