ನ್ಯಾಮತಿ: ಪಟ್ಟಣದಲ್ಲಿರುವ ಬಾಲಕಿಯರ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಇಂದು ಸನ್ಮಾನ್ಯ ಶ್ರೀ ಡಿ. ದೇವರಾಜ್ ಅರಸುರವರ 108ನೇ ಜನ್ಮದಿನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಶಾಸಕ ಡಿ ಜಿ ಶಾಂತನಗೌಡ್ರು ಅವರು ಉದ್ಘಾಟಿಸಿ ನಂತರ ಮಾತನಾಡಿದ ಅವರು ನಾಡು ಕಂಡ ಧೀಮಂತ ನಾಯಕರು ಮಾಜಿ ಮುಖ್ಯಮಂತ್ರಿಗಳು ಆದ ಡಿ ದೇವರಾಜ್ ಅರಸುರವರನ್ನ ಸಾಮಾಜಿಕ ಹರಿಕಾರರು, ಅಪರೂಪದ ರಾಜಕಾರಣಿ ಅರಸುರವರು ಬಡವರ, ಸಾಮಾಜಿಕ ನ್ಯಾಯದ ಪರವಾಗಿದ್ದವರು. ಭೂ ಸುಧಾರಣೆಯ ಜಾರಿಗೆ ತಂದು ಉಳುವನೇ ಭೂ ಒಡೆಯ ಎಂಬ ಕಾಯ್ದೆಯನ್ನು ಜಾರಿಗೆ ತಂದು ಸಮಾಜದಲ್ಲಿ ಸಮಾನತೆ ತರುವುದರ ಮೂಲಕ ಸಾಮಾಜಿಕ ನ್ಯಾಯದ ಹರಿಕಾರ ರಾಗಿ ರಾಜ್ಯವನ್ನು ಆಳಿದ ಅಪರೂಪದ ರಾಜಕಾರಣಿ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ ಟು ತಹಸಿಲ್ದಾರ್ ಗೋವಿಂದಪ್ಪ ಇಇ ಓ ಕರಿಬಸಪ್ಪ
ಎಎ ಇ ಶ್ರೀನಿವಾಸ್, ಎಎಸ್ ಐ ಚಂದ್ರಪ್ಪ, ಕಲ್ಯಾಣ ಅಧಿಕಾರಿ ದೇವರಾಜ್ ಅರಸುಹಿಂದುಳಿದ ವರ್ಗ ಇಲಾಖೆ ಮೃತುಂಜಯ ಸ್ವಾಮಿ, ನೆಲೆಯ ಮೇಲ್ವಿಚಾರಕರು ಸೀಮಾ ಎಚ್ ತಾಲೂಕು ಮಟ್ಟದ ಅಧಿಕಾರಿ ವರ್ಗದವರು ಸಹ ಉಪಸ್ಥಿತಿಯಲ್ಲಿದ್ದರು.

Leave a Reply

Your email address will not be published. Required fields are marked *