ನಾಗಾರಾಧನೆಗೆ ಸ್ಥಳದಾನ ಮಾಡಿದ ಸ್ಪೀಕರ್ ಯು.ಟಿ.ಖಾದರ್

ಮಂಗಳೂರು:ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕ ಗ್ರಾಮದಲ್ಲಿ ವಿಧಾನಸಭಾ ಸಭಾಪತಿಗಳಾದ ಸನ್ಮಾನ್ಯ ಶ್ರೀ ಯು.ಟಿ.ಖಾದರ್ ಅವರಿಗೆ ಸೇರಿದ ಎಕ್ಕರೆ ಗಟ್ಟಲೆ ಪಿತ್ರಾರ್ಜಿತ ಜಮೀನು ಇದೆ. ಅದರಲ್ಲಿ ಅಡಕೆ, ತೆಂಗು ಕೃಷಿ ಫಲವತ್ತಾಗಿ ಬೆಳೆದಿದೆ. ಆದರೆ ಆ ಜಮೀನಿನ ಒಂದು ಭಾಗದಲ್ಲಿ ಇಂದಿಗೂ ನಾಗರ ಪಂಚಮಿ ಹಬ್ಬದ ದಿನದ ಅಂಗವಾಗಿ ನಾಗರ ಪಂಚಮಿ ಹಬ್ಬವನ್ನು ಅದ್ಧೂರಿಯಾಗಿಯೇ ನಡೆಸುತ್ತಾರೆ. ಯು.ಟಿ.ಖಾದರ್ ಮತ್ತು ನಾಗಾರಾಧನೆಗೆ ಎತ್ತಣದೆತ್ತ ಸಂಬಂಧ? ಹೌದು, ಈ ಪ್ರಶ್ನೆ ಸಾಮಾನ್ಯವಾಗಿ ಜನರಿಗೆ ಕಾಡುತ್ತದೆ.ಹಿಂದಿನ ಹಿರಿಯರ ಕಾಲದಲ್ಲಿ ಖಾದರ್ ಅವರ ಸೊತ್ತು ದಳವಾಯಿ ಕುಟುಂಬದ ಅಧೀನದಲ್ಲಿತ್ತು. ಮಾಜಿ ಮುಖ್ಯಮಂತ್ರಿಗಳು ಡಿ ದೇವರಾಜ ಅರಸ್ ರವರು ಭೂ ಸುಧಾರಣೆ ಕಾನೂನು ತಂದ ಸಂದರ್ಭದಲ್ಲಿ ಆ ಕಾನೂನಿನ ಅಡಿಯಲ್ಲಿ ಖಾದರ್ ಕುಟುಂಬದ ಹಿರಿಯರಿಗೆ ಆ ಜಮೀನು ಸಿಕ್ಕಿತ್ತು. ಪಾಲು ಮಾಡುವ ಸಂದರ್ಭದಲ್ಲಿ ಪಿತ್ರಾರ್ಜಿತ ಆಸ್ತಿ ಖಾದರರವರ ಪಾಲಾಯಿತು. ದಳವಾಯಿ ಕುಟುಂಬಕ್ಕೆ ಸೇರಿದ ನಾಗನ ಕಟ್ಟೆ ಅದೇ ಜಮೀನಲ್ಲಿತ್ತು. ದಳವಾಯಿ ಕುಟುಂಬದ ನಾಗಸಾನಿಧ್ಯವು ಮುಸ್ಲಿಂ ಧರ್ಮದವರ ಸ್ಥಳದಲ್ಲಿರುವುದರಿಂದ ಅವರು ಬೇರೆ ಸ್ಥಳದಲ್ಲಿ ನಾಗರಾಧನೆಯನ್ನು ಮಾಡುತ್ತಿದ್ದರು. ಮೂಲ ಸ್ಥಾನದ ನಾಗರ ಕಟ್ಟೆಯಲ್ಲಿ ಪೂಜೆಯಾಗದೇ ಇರುವುದರಿಂದ ದಳವಾಯಿ ಕುಟುಂಬಕ್ಕೆ ಸಮಸ್ಯೆ ತಲೆದೋರಿತ್ತು.

ಅಷ್ಟಮಂಗಳ ಪ್ರಶ್ನೆ ಇಟ್ಟಾಗ ಮೂಲ ಜಾಗದಲ್ಲಿ ನಾಗಪೂಜೆ ನಡೆಯಬೇಕೆಂದು ಕಂಡು ಬಂತಾದರೂ ಅವರಿಗೆ ಆರಾಧನೆಗೆ ತೊಡಕಾಗಿತ್ತು. ಕೊನೆಗೂ ಬೇರೆ ದಾರಿ ಕಾಣದೆ ದಳವಾಯಿ ಕುಟುಂಬ ನಾಗನಕಟ್ಟೆಯ ಆ ಜಾಗದ 10 ಸೆಂಟ್ಸ್ ಸ್ಥಳ ಖರೀದಿಗೆ ಯು.ಟಿ.ಖಾದರ್ ಅವರಿಗೆ ಬೇಡಿಕೆ ಇಟ್ಟಿದ್ದರು. ವಿಷಯ ತಿಳಿದ ಖಾದರರವರು ಆ ಪರಿಸರಕ್ಕೆ ಸೇರಿದ ಜಾಗ 10ಕ್ಕೆ 10 ಸೆಂಟ್ಸ್ ಸೇರಿಸಿ ಒಟ್ಟು 20 ಸೆಂಟ್ಸ್ ಜಾಗವನ್ನ ದಳವಾಯಿ ಕುಟುಂಬಕ್ಕೆ ಉಚಿತವಾಗಿ ಬಿಟ್ಟುಕೊಟ್ಟು ಉದಾರತೆ, ಮಾನವೀಯತೆ ಮೆರೆದರು. ಇದೀಗ ಹಲವು ವರ್ಷಗಳಿಂದ ಅಲ್ಲಿ ವಿಜ್ರಂಬಣೆಯ ನಾಗಾರಾಧನೆ ನಡೆಯುತ್ತಿದೆ.

ನಾಗರ ಪಂಚಮಿಯ ಈ ದಿನ ದಳವಾಯಿ ಕುಟುಂಬಸ್ಥರೆಲ್ಲೂರೂ ಅಲ್ಲಿ ಬಂದು ಸೇರಿ. ಸಂತೋಷದಿಂದ ಆ ಜಾಗದಲ್ಲಿ ನಾಗನಕಟ್ಟೆಗೆ ಪೂಜೆ ಕೈಂ ಕೈರ್ಯವನ್ನು ಸಾಂಗೊಪಾಂಗವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಅವರು ಮುಸ್ಲಿಂ ಧರ್ಮದಲ್ಲಿ ಹುಟ್ಟಿದರು ಸಹ ಹಿಂದೂ ಧರ್ಮದಲ್ಲಿ ನಾಗಪೂಜೆ ಮಾಡುವಂತಹ ಸಹೋದರ ಧರ್ಮಗಳ ಜೊತೆಗಿನ ಧರ್ಮ ಬಾಂಧವ್ಯಕ್ಕೂ ಎಷ್ಟು ಗೌರವ ಕೊಡುತ್ತಾರೆ ಎನ್ನುವುದಕ್ಕೆ ಇದೊಂದು ಸಾಕ್ಷಿಯಾಗಿದೆ ಎನ್ನುತ್ತಾರೆ ಮಂಗಳೂರಿನ ರಸೀದ್ ವಿಟ್ಲಾ.

Leave a Reply

Your email address will not be published. Required fields are marked *