ಶಿವಮೊಗ್ಗ, ಆಗಸ್ಟ್ 22, ಫಿರ್ಯಾದಾರರಾದ
ಶ್ರೀ ಶಿವರಾಜ್ ಡಿ, ಬಿನ್, ದುರ್ಗಪ್ಪ, ಭೋವಿ ಜನಾಂಗ, ವ್ಯವಸಾಯ
ಕೆಲಸ, ಕ್ಯಾತನಕೊಪ್ಪ ಗ್ರಾಮ, ಶಿವಮೊಗ್ಗ ತಾಲ್ಲೂಕು ಮತ್ತು
ಜಿಲ್ಲೆ ಇವರು ಶಿವಮೊಗ್ಗ ತಾಲ್ಲೂಕು ಹೊಳಲೂರು ಹೋಬಳಿ
ಕ್ಯಾತನಕೊಪ್ಪ ಗ್ರಾಮದವರಿದ್ದು, ಸದರಿ ಗ್ರಾಮದ ರಿ.ಸ.ನಂ.
49ರಲ್ಲಿ ತಮ್ಮ ಪತ್ನಿ ಶ್ರೀಮತಿ ದೇವಮ್ಮ ಇವರ ಹೆಸರಿಗೆ 2.03
ಎಕರೆ ಜಮೀನನ್ನು ದಿ: 09-03-2023ರಂದು ಖರೀದಿಸಿರುತ್ತಾರೆ.
ಸರ್ಕಾರದ ಆದೇಶದಂತೆ ದನಗಳಿಗೆ ಮುಫತ್ತು ಶೀರ್ಷಿಕೆ ಅಡಿ
ಬಗರ್ ಹುಕುಂ ಸಾಗುವಳಿ ಸಕ್ರಮೀಕರಿಸಿ ಆದೇಶವಾಗಿರುತ್ತದೆ.
ಫಿರ್ಯಾದುದಾರರ ರೀತಿಯಲ್ಲಿಯೇ ಕ್ಯಾತನಕೊಪ್ಪ ಗ್ರಾಮದ
ಫಿರ್ಯಾದುದಾರರ ಜಮೀನು ಪಕ್ಕದಲ್ಲಿ ಬಗರ್ ಹುಕುಂ ಸಾಗುವಳಿ
ಮಾಡುತ್ತಿರುವ ಶ್ರೀಮತಿ ಮಂಜುಳಾ ಕೋಂ ಬಸವರಾಜಪ್ಪ
ಎನ್ನುವವರಿಗೂ ಸಹಾ 2.02 ಎಕರೆ ಜಮೀನು ಮಂಜೂರು ಆಗಿದ್ದು,
ಇಬ್ಬರೂ ಸೇರಿ ಪಹಣಿ ಮಾಡಿ ಕೊಡಲು ತಹಸೀಲ್ದಾರ್, ಶಿವಮೊಗ್ಗ
ಇವರಿಗೆ ಅರ್ಜಿ ಸಲ್ಲಿಸಿದ್ದು, ತಹಸೀಲ್ದಾರ್ ರವರು ಉಪ ತಹಸೀಲ್ದಾರ್,
ನಾಡ ಕಛೇರಿ, ಹೊಳಲೂರು ಹೋಬಳಿ ಇವರಿಗೆ ಸೂಚಿಸಿರುತ್ತಾರೆ.
ಪಹಣಿ ದಾಖಲಿಸುವ ಸಂಬಂಧ ಹೊಳಲೂರು, ಉಪ ತಹಸೀಲ್ದಾರ್
ಕಛೇರಿಯಿಂದ ಫಿರ್ಯಾದುದಾರರಿಗೆ ದಿ: 09-08-2023ರಂದು ನೋಟೀಸ್
ನೀಡಿದ್ದರಿಂದ ಫಿರ್ಯಾದಿ ಮತ್ತು ಶ್ರೀಮತಿ ಮಂಜುಳಾ ಕೋಂ
ಬಸವರಾಜಪ್ಪ ಇವರು ದಿ: 18-08-2023ರಂದು ಉಪ ತಹಸೀಲ್ದಾರ್
ಪರಮೇಶ್ ಇವರನ್ನು ಭೇಟಿಯಾಗಿ ವಿಚಾರಿಸಿದಾಗ, ಅವರು
ಫಿರ್ಯಾದಿಗೆ ದಾಖಲೆಗಳನ್ನು ಕೇಳಿದ್ದು, ಅದರಂತೆ
ಫಿರ್ಯಾದಿಯು ಶಿವಮೊಗ್ಗ ತಹಸೀಲ್ದಾರರು ನೀಡಿದ ನಮೂನೆ-7
ಸಾಗುವಳಿ ಚೀಟಿ ಮತ್ತು ಸರ್ಕಾರದ ಆದೇಶಗಳನ್ನು ಅವರಿಗೆ
ತೋರಿಸಿದಾಗ ಉಪ ತಹಸೀಲ್ದಾರ್ ಪರಮೇಶ್ ಇವರು ದಿ: 21-08-
2023ರಂದು ಮಧ್ಯಾಹ್ನ ಬರುವಂತೆ ಫಿರ್ಯಾದಿಗೆ ಸೂಚಿಸಿರುತ್ತಾರೆ.
ನಂತರ ಸದರಿ ಕಛೇರಿಯಲ್ಲಿ ಕೆಲಸ ಮಾಡಿಕೊಂಡು
ಓಡಾಡುತ್ತಿದ್ದ ಪ್ರಕಾಶ್ ಇವರ ಹತ್ತಿರ ಫಿರ್ಯಾದಿಯು ತಮ್ಮ
ಕೆಲಸದ ಬಗ್ಗೆ ವಿವರಿಸಿ ಅವರ ಸಹಾಯ ಕೇಳಿದಾಗ ಆರೋಪಿ-1 ಎಸ್.
ಪರಮೇಶ್, ಉಪ ತಹಸೀಲ್ದಾರ್, ನಾಡ ಕಛೇರಿ, ಹೊಳಲೂರು
ಹೋಬಳಿ ಇವರು ಫಿರ್ಯಾದಿಗೆ ರೂ. 30,000/-ಗಳ ಲಂಚದ ಹಣಕ್ಕಾಗಿ
ಆರೋಪಿ-2 ಎಲ್.ಎ. ಪ್ರಕಾಶ್ನಾಯ್ಕ ಮಧ್ಯವರ್ತಿ ಇವನ ಮುಖೇನ
ಬೇಡಿಕೆಯಿಟ್ಟಿರುತ್ತಾರೆ. ಅಲ್ಲದೇ ಹಣ ಕೊಡದಿದ್ದರೆ ಕೇಸ್ ವಜಾ
ಮಾಡಿ ಎ.ಸಿ. ಕೋರ್ಟ್ಗೆ ಹಾಕುತ್ತಾರಂತೆ, ಹಣ ಕೊಟ್ಟರೆ ನಾಳೆನೇ
ಪಹಣಿ ಆಗುತ್ತೆ ಎಂದು ಸಹಾ ತಿಳಿಸಿರುತ್ತಾರೆ. ನಂತರ ಆರೋಪಿ-2
ಪ್ರಕಾಶ್ನಾಯ್ಕ ಇವರು ಉಪ ತಹಸೀಲ್ದಾರರಿಗೆ ರೂ. 30,000/-
ಮತ್ತು ತನಗೆ ರೂ. 5,000/-ಗಳನ್ನು ನೀಡುವಂತೆ ಫಿರ್ಯಾದಿಗೆ
ಲಂಚದ ಹಣಕ್ಕೆ ಬೇಡಿಕೆಯಿಟ್ಟಿರುತ್ತಾರೆ
ಸರ್ಕಾರದಿಂದ ಸಾಗುವಳಿ ಚೀಟಿ ನೀಡಿದ ಜಮೀನಿಗೆ ಲಂಚದ ಹಣ
ಕೊಟ್ಟು ಪಹಣಿ ಮಾಡಿಸಿಕೊಳ್ಳಲು ಇಷ್ಟವಿರದ ಕಾರಣ
ಫಿರ್ಯಾದಿಯು ಶಿವಮೊಗ್ಗ | ಹೊಳಲೂರು ಹೋಬಳಿ ನಾಡ
ಕಛೇರಿಯ ಉಪ ತಹಸೀಲ್ದಾರರಾದ ಎಸ್. ಪರಮೇಶ್ ಮತ್ತು
ಅವರ ಖಾಸಗಿ ಸಹಾಯಕನಾದ ಪ್ರಕಾಶ್ ಇವರುಗಳ ವಿರುದ್ಧ
ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಶಿವಮೊಗ್ಗ
ಲೋಕಾಯುಕ್ತ ಕಛೇರಿಗೆ ದೂರು ಕೊಟ್ಟ ಮೇರೆಗೆ
ಕ.ಲೋ., ಶಿವಮೊಗ್ಗ ಠಾಣೆ ಗುನ್ನೆ ನಂ: 08/2023, ಕಲಂ 7 (ಚಿ) 7 (ಂ),
ಪಿ.ಸಿ. ಕಾಯ್ದೆ 1988(ತಿದ್ದುಪಡಿ ಕಾಯ್ದೆ-2018)ರಲ್ಲಿ ಪ್ರಕರಣ
ದಾಖಲಾಗಿರುತ್ತದೆ.
ಅದರಂತೆ ಇಂದು ದಿ: 22-08-2023ರಂದು ಆರೋಪಿ-1 ಎಸ್,
ಪರಮೇಶ್, ಉಪ ತಹಸೀಲ್ದಾರ್ ರವರ ಸೂಚನೆಯಂತೆ ಆರೋಪಿ-2
ಎಲ್.ಎ. ಪ್ರಕಾಶ್ನಾಯ್ಕ ಇವರು ಶಿವಮೊಗ್ಗ ತಾಲ್ಲೂಕು,
ಹೊಳಲೂರು ಹೋಬಳಿಯ ನಾಡ ಕಛೇರಿಯಲ್ಲಿ ಫಿರ್ಯಾದಿಯಿಂದ
ರೂ. 30,000/-ಗಳ ಲಂಚದ ಹಣವನ್ನು ಪಡೆಯುವಾಗ ನಮ್ಮ
ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಹಾಗೂ
ಆರೋಪಿಗಳಿಂದ ಲಂಚದ ಹಣ ರೂ. 30,000/-ಗಳನ್ನು
ವಶಪಡಿಸಿಕೊಳ್ಳ ಲಾಗಿದೆ. ಆಪಾದಿತ-1 ಎಸ್. ಪರಮೇಶ್, ಉಪ
ತಹಸೀಲ್ದಾ, ನಾಡ ಕಛೇರಿ, ಹೊಳಲೂರು ಹೋಬಳಿ, ಶಿವಮೊಗ್ಗ ತಾಟಟ
&ಚಿmಠಿ; ಆಪಾದಿತ-2 ಎಲ್.ಎ. ಪ್ರಕಾಶ್ನಾಯ್ಕ, ಆಪಾದಿತ-ರವರ ಸಹಾಯಕ
ಇವರುಗಳನ್ನು ತನಿಖಾಧಿಕಾರಿಗಳಾದ ಉಮೇಶ ಈಶ್ವರ ನಾಯ್ಕ,
ಡಿವೈ.ಎಸ್.ಪಿ. ಇವರು ದಸ್ತಗಿರಿ ಮಾಡಿ ಮುಂದಿನ ತನಿಖೆ ಕೈಗೊಂಡಿದ್ದು
ಇರುತ್ತದೆ. ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಕಛೇರಿಯ
ಪ್ರಭಾರಿ ಪೆÇಲೀಸ್ ಅಧೀಕ್ಷಕರಾದ ಎನ್. ವಾಸುದೇವರಾಮ ಇವರ
ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ ಆಪಾದಿತರನ್ನು
ಬಂಧಿಸಲಾಗಿರುತ್ತದೆ.
ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ
ಪೆÇಲೀಸ್ ನಿರೀಕ್ಷಕರಾದ ಹೆಚ್.ರಾಧಾಕೃಷ್ಣ, ಮತ್ತು ಸಿಬ್ಬಂದಿಗಳಾದ
ಪ್ರಸನ್ನ, ಸಿ.ಹೆಚ್.ಸಿ., ಮಹಂತೇಶ, ಸಿ.ಹೆಚ್.ಸಿ., ಯೋಗೀಶ್, ಸಿ.ಹೆಚ್.ಸಿ.,
ಸುರೇಂದ್ರ, ಸಿ.ಹೆಚ್.ಸಿ., ಬಿ.ಟಿ. ಚನ್ನೇಶ, ಸಿಪಿಸಿ, ಪ್ರಶಾಂತ್ಕುಮಾರ್, ಸಿಪಿಸಿ,
ಅರುಣ್ ಕುಮಾರ್, ಪಿಸಿ, ದೇವರಾಜ, ಸಿ.ಪಿ.ಸಿ, ರಘನಾಯ್ಕ, ಸಿ.ಪಿ.ಸಿ ಶ್ರೀಮತಿ
ಪುಟ್ಟಮ್ಮ, ಮಪಿಸಿ, ಶ್ರೀಮತಿ ಸಾವಿತ್ರಮ್ಮ, ಮಪಿಸಿ ಗಂಗಾಧರ, ಎಪಿಸಿ
ತರುಣ್ಕುಮಾರ್, ಎಪಿಸಿ ಮತ್ತು ಪ್ರದೀಪ್ ಕುಮಾರ್, ಎಪಿಸಿ, ಜಯಂತ್ ಎಪಿಸಿ
ಮತ್ತು ವಿ. ಗೋಪಿ, ಎಪಿಸಿ, ಇವರುಗಳು ಹಾಜರಿದ್ದು, ಕರ್ತವ್ಯ
ನಿರ್ವಹಿಸುತ್ತಾರೆ.