ನ್ಯಾಮತಿ: ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಆಗಸ್ಟ್ 24 ಗುರುವಾರ ಬೆಳಗ್ಗೆ 11 ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಫಲವನಹಳ್ಳಿ ಶಾಲೆಯ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ 18ರಿಂದ 30 ವರ್ಷದ ವಯೋಮಿತಿ ಒಳಗಡೆ ಇರುವ ಯುವಕ ಯುವತಿಯರಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಡಿಗ್ರಿ ಮಾಡಿದಂತ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಗೋವಿಂದರಾಜ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಉದ್ಯೋಗ ಮೇಳವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೋವಿಂದರಾಜ ನಂತರ ಮಾತನಾಡಿ ಬೆಂಗಳೂರು ಕೆ ಜಿ ಹಳ್ಳಿ ಯಲ್ಲಿರುವ ಐಶ್ವರ್ಯ ವಿಜ್ಞಾನ ಎಜುಕೇಶನ್ ಸಂಸ್ಥೆ ಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದ ಅನ್ವಯ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಡಿಗ್ರಿ ಆದಂತ ವಿದ್ಯಾರ್ಥಿಗಳಿಗೆ ನಾಲ್ಕು ತಿಂಗಳ ಕಾಲ ತರಬೇತಿಯ ಜೊತೆಗೆ ಊಟ ವಸತಿಯನ್ನು ನೀಡಿ ತರಬೇತಿ ಪಡೆದ ನಂತರ ಉದ್ಯೋಗ ಅವಕಾಶವನ್ನು ಕಲ್ಪಿಸಿ ಕೊಡುತ್ತಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಿಡಿಒ ಸೋಮಶೇಖರಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರವೀಣ್ ಗಂಜಿನಳ್ಳಿ ಪ್ರಕಾಶ್ ನಾಯ್ಕ ಜಿಲ್ಲಾ ಸಂಚಾಲಕರು ಪುಟ್ಟೇಶ್ ಜಿಲ್ಲಾ ಸಂಯೋಜಕರು ಸಿದ್ದು ಕೆ ನ್ಯಾಮತಿ ದೀನ್ ದಯಾಳ್ ಸಂಸ್ಥೆಯ ಆಶಾ ಹಾಗೂ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಂತೆ ಎಲ್ಲಾ ವಿದ್ಯಾರ್ಥಿಗಳು ಸಹ ಉಪಸ್ಥಿತಿಯಲ್ಲಿದ್ದರು.