ನ್ಯಾಮತಿ: ತಾಲೂಕು ಯರಗನಾಳ್ ಗ್ರಾಮದಲ್ಲಿಂದು ನೊಳಂಬ ವೀರಶೈವ ಲಿಂಗಾಯತ ಮತ್ತು ಸಾಧು ವೀರಶೈವ ಲಿಂಗಾಯಿತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮಾಜದವರ ಒಪ್ಪಿಗೆಯ ಮೇರೆಗೆ ನಂದಿ ವಿಗ್ರಹವನ್ನು ವೀರಭದ್ರೇಶ್ವರ ಸಮುದಾಯ ಭವನದ ಎದುರುಗಡೆ ಪ್ರತಿಷ್ಠಾಪನೆಯನ್ನು ಮಾಡಲು ತೀರ್ಮಾನಿಸಲಾಯಿತು.ಹಾಲಿ ಶಾಸಕ ಡಿ ಜಿ ಶಾಂತನಗೌಡ್ರು ಮತ್ತು ಮಾಜಿ ಶಾಸಕರ ಡಿ ಬಿ ಗಂಗಪ್ಪನವರು ಸಮಾಧಾನದಿಂದ ಕುಳಿತು ಎರಡು ಸಮುದಾಯದ ಸಮಸ್ಯೆಗಳನ್ನು ಆಲಿಸಿ, ಚಚೆಯನ್ನು ಮಾಡಿ ಹಳೆದು ತೂಗಿ ಯಾವುದೇ ಸಮುದಾಯಕ್ಕೆ ತೊಂದರೆಯಾಗದ ರೀತಿಯಲ್ಲಿ ಚರ್ಚಿಸಿ, ಗ್ರಾಮಸ್ಥರ ಪ್ರತಿಯೊಂದು ಸಮಾಜದ ಮುಖಂಡರುಗಳ ಒಪ್ಪಿಗೆ ಮೇರೆಗೆ ವೀರಭದ್ರ ಸ್ವಾಮಿ ದೇವಸ್ಥಾನ ಸಮುದಾಯ ಭವನದ ಎದುರುಗಡೆ ನಂದಿ ವಿಗ್ರಹವನ್ನು ಪ್ರತಿಷ್ಠಾಪನೆಯನ್ನು ಮಾಡಲು ತಕ್ಷಣವೇ ಡಿಜೆ ಶಾಂತನಗೌಡ್ರು ಮತ್ತು ಮಾಜಿ ಶಾಸಕರಾದ ಡಿ ಬಿ ಗಂಗಪ್ಪನವರು ಮುಖಂಡರು ಸೇರಿದಂತೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಇತಿಶ್ರೀ ಹಾಡಿದರು. ಈ ಸಂದರ್ಭದಲ್ಲಿ ಹಾಲಿ ಮತ್ತು ಮಾಜಿ ಶಾಸಕರುಗಳು ಅವಳಿ ತಾಲೂಕಿನ ಸಾಧು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರುಗಳು ನೊಳಂಬವ ವೀರಶೈವ ಲಿಂಗಾಯತ ಸಮಾಜದ ಮುಖಂಡರುಗಳು ಹಾಗೂ ಯರಗನಾಳ ಗ್ರಾಮದ ಪ್ರತಿಯೊಂದು ಸಮಾಜದ ಮುಖಂಡರುಗಳು ಸಹ ಉಪಸ್ಥಿತಿಯಲ್ಲಿದ್ದರು.