ನ್ಯಾಮತಿ ತಾಲೂಕು ತೀರ್ಥರಾಮೇಶ್ವರ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಸುಮಾರು 25 ಲಕ್ಷ ವೆಚ್ಚದ ಎರಡು ಸುಸಜ್ಜಿತವಾದ ಅಡಿಗೆ ಕೊಠಡಿ ಹಾಗೂ ಹಾಲ್ ಸೇರಿದಂತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ಡಿ ಜಿ ಶಾಂತನಗೌಡ್ರು ನೆರವೇರಿಸಿದರು. ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿ ಅವರು ಸುಮಾರು ವರ್ಷಗಳಿಂದ ಈ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬರುತ್ತಾರೆ. ಈ ದೇವಸ್ಥಾನದಲ್ಲಿ ಮದುವೆ ಜವಳ ಕಲ್ಯಾಣ ಕಾರ್ಯಕ್ರಮಗಳು ಸದಾ ಜರುಗುತ್ತಲೆ ಇರುತ್ತವೆ. ಈ ದೇವಸ್ಥಾನಕ್ಕೆ ಬಂದಂತ ಎಲ್ಲಾ ಭಕ್ತಾದಿಗಳಿಗೆ ಅಡಿಗೆ ಮಾಡಲಿಕ್ಕೆ ಸರಿಯಾದ ಕೊಠಡಿ ಮತ್ತು ಹಾಲ್ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಕಾರ್ಯಕ್ಕೆ ಬಂದ ಸಂದರ್ಭದಲ್ಲಿ ಪರದಾಡುತ್ತಿದ್ದರು. ಈ ಭಾಗದ ಭಕ್ತರ ಬೇಡಿಕೆ ಸುಮಾರು ವರ್ಷಗಳಿಂದ ಕನಸಾಗಿತ್ತು. ಇದನ್ನು ಮನಗಂಡ ಶಾಸಕ ಡಿ ಜಿ ಶಾಂತನಗೌಡ್ರು ಅವರು ಮುಜರಾಯಿ ಇಲಾಖೆ ವತಿಯಿಂದ ಸುಮಾರು 25 ಲಕ್ಷ ರೂ ಅನುದಾನ ತೆಗೆದುಕೊಂಡು ಬಂದು ಇಂದು ತೀರ್ಥರಾಮೇಶ್ವರ ದೇವರ ಆಶೀರ್ವಾದ ಪಡೆದ ನಂತರ ಇಂದು ಅಡಿಗೆ ಕೊಠಡಿಯ ಗುದ್ದಲಿ ಪೂಜೆಯ ನೆರವೇರಿಸಿದರು. ಬೇಗನೆ ಕಾಮಗಾರಿ ಮುಗಿಸಿ ಭಕ್ತರುಗಳಿಗೆ ಬೇಗ ಬಿಟ್ಟು ಕೊಡಬೇಕೆಂದು ಗುತ್ತಿಗೆದಾರನಿಗೆ ತಾಕಿತು ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರತ್ನ ಉಪಾಧ್ಯಕ್ಷ ಎಲ್ ನಾಗರಾಜ್, ಷಣ್ಮುಖಪ್ಪ, ಕುಬೇರಪ್ಪ ತೀರ್ಥಲಿಂಗಪ್ಪ ಪರಮೇಶಣ್ಣ ಮಲ್ಲಿಗೆನಹಳ್ಳಿ , ಬೆಳಗುತ್ತಿ ಮತ್ತು ಮಲ್ಲಿಗೆನಹಳ್ಳಿ ಗ್ರಾಮಸ್ಥರು ಸಹ ಉಪಸ್ಥಿತಿಯಲ್ಲಿದ್ದರು.