ನ್ಯಾಮತಿ ತಾಲೂಕು ಗುಡ್ಡಹಳ್ಳಿ ಗ್ರಾಮದಲ್ಲಿರುವ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜನತಾದರ್ಶನ ಕಾರ್ಯಕ್ರಮವಾಗಿದ್ದು ಸೋಮವಾರ ಸೆ 25ರಂದು ಗುಡ್ಡಹಳ್ಳಿ ಗ್ರಾಮದಲ್ಲಿ ಶೃಂಗರಿಸಿದ ಎತ್ತಿನಗಾಡಿಯಲ್ಲಿ ಮಹಿಳೆಯರು ಪೂರ್ಣ ಕುಂಭಮೇಳದೊಂದಿಗೆ ಡೊಳ್ಳು ಮತ್ತು ಹಲಗೆ ಸನಾಯಿದೊಂದಿಗೆ ಊರಿನ ದ್ವಾರ ಬಾಗಿಲಿಂದ ಹಿಡಿದು ಶಾಲೆಯವರೆಗೆ ಮೆರವಣಿಗೆ ಮೂಲಕ ಗುಡ್ಡಹಳ್ಳಿ ಗ್ರಾಮಸ್ಥರು ಸ್ವಾಗತದೊಂದಿಗೆ ಗ್ರಾಮಕ್ಕೆ ಶಾಸಕ ಡಿಜಿ ಶಾಂತನಗೌಡ್ರು ಅವರನ್ನು ಬರಮಾಡಿಕೊಂಡರು.

 ನ್ಯಾಮತಿ ತಾಲೂಕು ಗುಡ್ಡಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯ ಆವರಣ ತಾಲೂಕ ಆಡಳಿತ ವತಿಯಿಂದ ನಡೆದ ಜನತಾದರ್ಶನ ವಿನೂತನ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಜಮೀನಿನ ಸಾಗುವಳಿ, ಮನೆ ಹಕ್ಕು ಪತ್ರ, ಕುಡಿಯುವ ನೀರಿನ ಸಮಸ್ಯೆ  ಸೇರಿದಂತೆ 4 ಹಳ್ಳಿಯ ಸುಮಾರು 100ಕ್ಕೂ ಹೆಚ್ಚು ಫಲಾನುಭವಿಗಳ ಕುಂದು ಕೊರತೆಗಳ ಮನವಿ ಪತ್ರವನ್ನ ಸುಮಾರು ರಾತ್ರಿ 8 ಗಂಟೆಯವರೆಗೆ ಸ್ವೀಕರಿಸಿ ಸ್ಥಳದಲ್ಲೇ ಸಮಸ್ಯೆಗಳನ್ನು ಇತ್ಯರ್ಥ ಗೊಳಿಸಿ ಈ ಭಾಗದ ನಾಲ್ಕು ಹಳ್ಳಿಗಳಲ್ಲಿ ಪಶು ಸಂಗೋಪನೆ ಮಾಡಿ ಜೀವನ ನಡೆಸುತ್ತಿದ್ದು ರೈತರುಗಳಿಗೆ ದನದ ಕೊಟ್ಟಿಗೆ ಕಟ್ಟಲಿಕ್ಕೆ ಸರ್ಕಾರದಿಂದ ಬಂದಂತ ಯೋಜನೆಗಳನ್ನು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ತಾಲೂಕ್ ನಿರ್ವಾಣಾಧಿಕಾರಿಗೆ ಸೂಚಿಸಿದರು. ನಮ್ಮ ಸರ್ಕಾರ ಮೊಟ್ಟ ಮೊದಲ ಬಾರಿಗೆ ಶಕ್ತಿ ಯೋಜನೆ ಜಾರಿಗೆ ತಂದು ತಾಯಿಂದಿರು ಸರ್ಕಾರಿ ಬಸ್ಸುಗಳಲ್ಲಿ ರಾಜ್ಯದ್ಯಂತ ಪ್ರಯಾಣಿಸುತ್ತಿದ್ದು ಇಂದಿಗೆ ಸುಮಾರು ನಾಲ್ಕು ತಿಂಗಳಲ್ಲಿ 2 ಕೋಟಿಗೂ ಅಧಿಕ ಮಹಿಳೆಯರು ಇದರ ಪ್ರಯೋಜನವನ್ನು ಸದುಪಯೋಗ ಪಡೆದುಕೊಂಡಿದ್ದಾರೆ. ಇನ್ನು 2ನೇ ಯೋಜನೆ ಗೃಹಜೋತಿ, 200 ಯೂನಿಟ್ ಉಚಿತ ವಿದ್ಯುತ್ ಜಾರಿಗೆ ತಂದಾಯ್ತು.3ನೇಯದು ಅನ್ನಭಾಗ್ಯ ಯೋಜನೆ. ಈಗ ಕೊಡುವ 5 ಕೆಜಿ  ಅಕ್ಕಿಯನ್ನು ನಾವು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಅಕ್ಕಿಯ ಲಭ್ಯತೆ ಸಿಗದೇ ಇರುವುದರಿಂದ ತಸ್ಥಮಾನವಾಗಿ 1 ಕೆಜಿ ಗೆ 34 ರೂನಂತೆ ಅಂತೋದಯ  ಹಾಗೂ ಬಿಪಿಎಲ್ ಕಾಡುದಾರರ ಅಕೌಂಟಿಗೆ ಹಣವನ್ನು ಸಂದಾಯ ಮಾಡಲಾಗಿದೆ. ಇನ್ನು ಮಹತ್ವ ಯೋಜನೆ ಗೃಹಲಕ್ಷ್ಮಿ ಯೋಜನೆ ಇದು ನಮಗೆ ಬಹಳ ಹೊರೆಯಾದರೂ ಸಹ  ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆಲ್ಲರಿಗೋ 2 ಸಾವಿರ ಹಣ ಹಾಕಲಾಗಿದೆ. ಹಣ ಬರದೇ ಇರುವವರು ಚಿಂತಿಸುವ ಅಗತ್ಯವಿಲ್ಲ. ಯಾರ್ಯಾರಿಗೆ ಹಣ ಬಂದಿಲ್ಲವೋ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಉಳಿದವರಿಗು ಹಣ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

 ಈ ವರ್ಷ 123 ವರ್ಷ ಇತಿಹಾಸದಲ್ಲಿ ಇಂತಹ 50 ದಿವಸ ಸತತ ಮಳೆ ಇಲ್ಲದ ಇತಿಹಾಸ. 123 ವರ್ಷ ನಮ್ಮ ತಾತ ಮುತ್ತಾತರ ಕಾಲದ ಹಿಂದಿತ್ತು. ಅಂತಹ ಬರಗಾಲ ಈ ವರ್ಷ ನಮ್ಮ ರಾಜ್ಯಕ್ಕೆ ಬಂದಿದೆ. ಯಾವಾಗ ಡ್ಯಾಮ್ ಗಳು ನೀರಿಲ್ಲದೆ ಒಣಗುತ್ತವೆ, ಕುಡಿಯುವ ನೀರಿಗೂ ಸಮಸ್ಯೆ, ಅವಳಿ ತಾಲೂಕಿನಲ್ಲಿ ಅಂಕಲ ಪಸಲು ಒಂದು ರೂಪಾಯದ್ದು ಇಲ್ಲ. ರೈತರು ಬೆಳೆಗಾಗಿ ಸಾಲ ಮಾಡಿಕೊಂಡು ಮನೆಯ ಹೆಣ್ಣು ಮಕ್ಕಳ ಬಂಗಾರವೆಲ್ಲ ಬ್ಯಾಂಕಿನಲ್ಲಿ ಇಡಲಾಗಿದೆ. ರೈತರ ಪರಿಸ್ಥಿತಿ ಬಿಗಡಾಯಿಸಿದೆ ತಾಲೂಕಿನ ಎಲ್ಲಾ ಅಧಿಕಾರಿಗಳು ಅಲರ್ಟ್ ಆಗಿ ಜನತಾದರ್ಶನದ ಕಾರ್ಯಕ್ರಮದಲ್ಲಿ ಜನರು ಏನೇನು ಸಮಸ್ಯೆಗಳಿಗೆ ಅರ್ಜಿ ಸಲ್ಲಿಸುತ್ತಾರೋ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಿ. ಒಂದು ವೇಳೆ ಜನರಿಂದ ಏನಾದರೂ ದೂರು ಬಂದರೆ ನಾನು ಸಹಿಸುವುದಿಲ್ಲ ಎಂದು ಖಡಕ್ಕಾಗಿ ಉತ್ತರಿಸಿದರು.


 ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ ಪ್ರಸ್ತಾವಿಕವಾಗಿ ಮಾತನಾಡಿ ಮಧ್ಯವರ್ತಿಗಳ ನಿರ್ಮೂಲನೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವುದು ಮತ್ತು ಜನರ ಮನೆ ಬಾಗಿಲಿಗೆ ಆಡಳಿತ ಕರೆದುಕೊಂಡು ಹೋಗುವುದು ಈ ಜನತಾದರ್ಶನ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೋಷಣ ಅಭಿಯಾನ ಯೋಜನೆ ಅಡಿಯಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಪೌಷ್ಟಿಕ ಆಹಾರ ಪ್ರದರ್ಶನ ಹಾಗೂ 10 ಜನ ಮಹಿಳೆಯರಿಗೆ ಸೀಮಂತ ಕಾರ್ಯ ಮಾಡಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ದಂಡಾಧಿಕಾರಿ ಗೋವಿಂದಪ್ಪ ಎಚ್ ಬಿ ವಹಿಸಿದ್ದರು. ಕಾರ್ಯನಿರ್ವಣಾಧಿಕಾರಿ ರಾಘವೇಂದ್ರ, ತಾಲೂಕು ಸಿಡಿಪಿಓ ಮಹಂತಾಸ್ವಾಮಿ ಪೂಜಾರ ಪೊಲೀಸ್ ಇನ್ಸ್ಪೆಕ್ಟರ್ ರವಿ ಅರಣ್ಯ ಅಧಿಕಾರಿ ಶಿವಯೋಗಿ ಗ್ರಾಮ ಪಂ ಸದಸ್ಯರು ಪಾಲಾಕ್ಷಪ್ಪ ಕಲಾವತಿ ಮೇಘರಾಜ‌ ಶಂಕರ್ ನಾಯ್ಕ ರವಿಕುಮಾರ್ ಉಷಾ ನಿಂಗಪ್ಪ ಪುಷ್ಪ ಹಾಗೂ ಗುಡ್ಡಳ್ಳಿ ಗ್ರಾಮಸ್ಥರು ಸೇರಿದಂತೆ 4ಹಳ್ಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *