ನ್ಯಾಮತಿ ತಾಲೂಕು ಚಿ. ಕಡದಕಟ್ಟೆ ಗ್ರಾಮ ಪಂಚಾಯಿತಿ 2022- 23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಪುರಸ್ಕಾರಕ್ಕೆ5 ಲಕ್ಷ ರೂಗಳು ಪ್ರೋತ್ಸಾಹ ಧನ ಪಾರಿತೋಷಕ ಅಭಿನಂದನ ಪತ್ರ ಒಳಗೊಂಡಂತೆ ಅ. 2 ರಂದು ಬೆಂಗಳೂರು ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಚೀ ಕಡ್ದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದರ ಫಲವಾಗಿ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಎಸ್ ಲಕ್ಷ್ಮಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗವಿಕಲರಿಗೆ ನಿರ್ವಣ ಬತ್ತೆ ಕೊಡಿಸುವುದು,
ಚೀ ಕಡದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದಿಂದ ಬಂದಂತ ಯೋಜನೆಗಳನ್ನ ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಾಗಿದೆ. ಶಿಕ್ಷಣ ಕಸವಿಲೇವಾರಿ ಘಟಕ, ವಿದ್ಯುತ್ ಸೇರಿದಂತೆ ಇನ್ನೂ ಹಲವಾರು ಕಾರ್ಯವನ್ನು ಪರಿಗಣಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಚೀ.ಕಡದಕಟ್ಟೆ ಗ್ರಾ ಪಂ ಆಯ್ಕೆಯಾಗಿರುವುದು ಸಂತಸ ತಂದಿದೆ.
ಆಶಾ
ಚಿ ಕಡದಕಟ್ಟೆ ಗ್ರಾ, ಪಂ,ಪಿ ಡಿ ಓ
ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಕರು ಮುಖ್ಯೋಪಾಧ್ಯಾಯರು ಸೇರಿದಂತೆ ಕ್ರಮವಹಿಸಿ ಜಾಗೃತಿ ಮೂಡಿಸಿರುವುದು.
ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿಯ ಮೂಲಕ ಮಹಿಳೆಮತ್ತು ಮಕ್ಕಳ ಸಾಗಾಣೆ ಹಾಗೂ ಬಾಲ್ಯ ವಿವಾಹದಂತ ಅನಿಷ್ಟ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿರುವುದು. ತೆರಿಗೆ ವಸೂಲಿ 15ನೇ ಹಣಕಾಸಿನ ಯೋಜನೆ ನಿಯಮಾನಸಾರ ಶೇಕಡ 25% ಎಸ್ ಟಿ ಎಸ್ ಸಿ ವಿಕಲಚೇತನರ ಹಣವನ್ನ ಸಮುದಾಯಕ್ಕೆ ಸದ್ಬಳಕೆ, ಕಂದಾಯ ವಸೂಲಿ ಪೂರ್ಣ ಪ್ರಮಾಣದ ಸಂಗ್ರಹ ಉಪಕರಗಳ ಲೆಕ್ಕ ಶೀರ್ಷಿಕೆ ಜಮಾ ಮಾಡಿರುವುದು. ಶುದ್ಧ ಕುಡಿಯುವ ನೀರು, ವಿದ್ಯುತ್ ಬಳಕೆ ಪೂರ್ಣ ಪ್ರಮಾಣ ಬಿಲ್ ಪಾವತಿಸಿರುವುದು, ಸ್ವಯಂ ಚಾಲಿತ ಬೀದಿ ದೀಪಗಳ ಬಳಕೆಗೆ ಸ್ವಯಂ ಚಾಲಿತ ವಿದ್ಯುನ್ಮಾನ ಯಂತ್ರ ಬಳಕೆ ಅಳವಡಿಸಿದೆ.
ನರೇಗಾ ಯೋಜನೆ ಅಡಿಯಲ್ಲಿ ನೈಜ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ಹಣ ಪಾವತಿಸಿರುವುದು, ಎಲ್ಲಾ ಶಾಲೆಗಳಲ್ಲಿ ಶುದ್ಧ ನೀರಿನ ಘಟಕ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ನಿರ್ಮಾಣ ಮಾಡಿ ಸಂಜೀವಿನಿ ಒಕ್ಕೂಟದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ತರಬೇತಿ ಕೊಡಿಸಿ ಸ್ವಚ್ಛತೆಗೆ ಮಹಿಳಾ ಆಟೋ ಡ್ರೈವರ್ ನೇಮಿಸಿಕೊಂಡು ನಿಯಮಾನುಸಾರ ಹಸಿ ಕಸ ಮತ್ತು ಒಣ ಕಸವನ್ನ ಘಟಕದಲ್ಲಿ ಸಂಗ್ರಹಿಸುವುದು,
ಸರ್ಕಾರದ ದೂರು ದೃಷ್ಟಿ ಯೋಜನೆ ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಗ್ರಾಮ ಪಂಚಾಯಿತಿ ಕೈಗೊಳ್ಳಬೇಕಾದ ಎಲ್ಲಾ ಸಮಗ್ರ ಅಭಿವೃದ್ಧಿ ಯೋಜನೆ ತಯಾರಿ ಮಾಡಿರುವುದು. ಬಾಪೂಜಿ ಸೇವಾ ಕೇಂದ್ರದ ಮೂಲಕ ಸಾರ್ವಜನಿಕರಿಗೆ ಆದ್ಯ ಸೇವೆ ಒದಗಿಸಿರುವುದು, ಡಿಜಿಟಲ್ ಗ್ರಂಥಾಲಯ ಅಭಿವೃದ್ಧಿ, ಪ್ರತಿ ಮಂಗಳವಾರ ಆರೋಗ್ಯ ಅಮೃತ ಅಭಿಯಾನದ ಅಡಿಯಲ್ಲಿ ಸಾರ್ವಜನಿಕರಿಗೆ ಬಿಪಿ ,ಶುಗರ್, ಎಚ್ಐವಿ, ಕಣ್ಣಿನ ಪರೀಕ್ಷೆ, ರಕ್ತ ಪರೀಕ್ಷೆ, ದಾದಿಯರು ಮತ್ತು ಆಶಾ ಕಾರ್ಯಕರ್ತರಿಂದ ತಪಾಸಣೆಗೆ ಒಳಪಡಿಸಿ ಸಾರ್ವಜನಿಕರ ಹಿತ ಕಾಪಾಡಿರುವುದು, ಸರ್ಕಾರ ಮತ್ತು ಸಾರ್ವಜನಿಕರ ಗಮನ ಸೆಳೆದು ಈ ಎಲ್ಲಾ ವಿಶೇಷ ಕಾರ್ಯಗಳಿಂದಾಗಿ ಚಿ, ಕಡದಕಟ್ಟೆ ಗ್ರಾಮ ಪಂಚಾಯಿತಿ ಗಾಂಧಿ ಪುರಸ್ಕಾರಕ್ಕೆ ಪಾತ್ರವಾಗಿದೆ.