ನ್ಯಾಮತಿ: ತಾಲೂಕು ಕಚೇರಿ ಆವರಣದಲ್ಲಿ ತಾಲೂಕ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಹಾತ್ಮ ಗಾಂಧೀಜಿಯವರ ೧೫೪ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಶಾಸಕ ಡಿಜಿ ಶಾಂತನಗೌಡ್ರು ಪುಷ್ಪ ನಮನ ಸಲ್ಲಿಸುವುದರ ಮುಖ್ಯೇನ ಭಕ್ತಿ ನಮನ ಸಲ್ಲಿಸಿದರು.
ತಹಶೀಲ್ದಾರ್ ಎಚ್ ,ಬಿ ಗೋವಿಂದಪ್ಪ, ಬೆಸ್ಕಾಂ ಎಇಇ ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶರಾವ್, ತಾಲೂಕು ಸಾಧು ವೀರ ಸೇವ ಸಮಾಜದ ಅಧ್ಯಕ್ಷ ಶಿವಣ್ಣ ಕೊಡಿಕೊಪ್ಪ, ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ಲೋಕೇಶಪ್ಪ ಗುಂದೂರು ,ಕಾರ್ಯದರ್ಶಿ ಕರಬಸಪ್ಪ, ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಊರಿನ ಗ್ರಾಮಸ್ಥರು ಸಹ ಭಾಗಿಯಾಗಿದ್ದರು.