ನ್ಯಾಮತಿ: ತಾಲೂಕು ಕೆಂಚಿಕೊಪ್ಪ ಗ್ರಾಮದಲ್ಲಿ ಆರ್‌ಐಡಿಎಫ್ ಯೋಜನೆ ಅಡಿಯಲ್ಲಿ 43 ರೂ ಲಕ್ಷದ ನೂತನ ಪಶು ಚಿಕಿತ್ಸಾಲಯ ಕಟ್ಟಡದ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ಡಿ ಜಿ ಶಾಂತನಗೌಡ್ರು ನೆರವೇರಿಸಿದರು. ಮಾಜಿ ಶಾಸಕ ಗಂಗಪ್ಪ, ರಾಮಲಿಂಗಪ್ಪ ಕೆ ಎಸ್, ಉಮಾಪತಿ ಜಿ ಶಾಂತನಗೌಡ, ಪಶು ವೈದ್ಯಾಧಿಕಾರಿ ವೀಣಾ ಎಂ ವೈ, ಊರಿನ ಗ್ರಾಮಸ್ಥರು ಸಹ ಇದ್ದರು.