ನ್ಯಾಮತಿ: ತಾಲೂಕು ಕೆಂಚಿಕೊಪ್ಪ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಗ್ರಾಮಸ್ಥರ ವತಿಯಿಂದ ಶಾಸಕ ಡಿಜಿ ಶಾಂತನಗೌಡ್ರುರವರಿಗೆ ಅಭಿನಂದನೆ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೆಂಚಿಕೊಪ್ಪ ಗ್ರಾಮದ ದ್ವಾರ ಬಾಗಿನಲ್ಲಿರುವ ನಂದಿ ವಿಗ್ರಹಕ್ಕೆ ಡಿ ಜಿ ಶಾಂತನಗೌಡ್ರು ಮಾಲಾರ್ಪಣೆ ಮಾಡಿದರು. ತದನಂತರ ವ್ಯವಸಾಯೋತ್ಪನ್ನ ಸಹಕಾರ ಸಂಘದ ಆವರಣದಲ್ಲಿ ಶಾಸಕ ಡಿಜಿ ಶಾಂತನಗೌಡ್ರು ದೀಪ ಬೆಳಗಿಸಿದರು ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು
1983 ರಲ್ಲಿ ನಮ್ಮ ಅಣ್ಣನವರಾದ ಡಿ ಜಿ ಬಸನಗೌಡ್ರು ವಿಧಾನಸಭಾ ಚುನಾವಣೆಯಲ್ಲಿ ಬಸ್ಸಿನ ಗುರುತಿಗೆ ನಿಂತಾಗ ಈ ಕೆಂಚೆಕೊಪ್ಪ ಗ್ರಾಮದವರು ಅಂದಿನ ಚುನಾವಣಾ ಸಂದರ್ಭದಲ್ಲಿ 99% ಮತವನ್ನು ಹಾಕಿ ಒಂದು ಮತವನ್ನು ವಿರೋಧಿ ಅಭ್ಯರ್ಥಿಗೆ ಮತಚಲಾಯಿಸಿದ್ದರು. ಇಂತ ಗ್ರಾಮವನ್ನು ನಮ್ಮ ಕುಟುಂಬದವರು ನಮ್ಮ ಜೀವಂತ ಅವಧಿ ಇರುವವರಿಗೆ ಮರೆಯಲಿಕ್ಕೆ ಸಾಧ್ಯ ಇಲ್ಲ ಎಂದು ನೆರೆದಂತ ಸಾರ್ವಜನಿಕರ ಮುಂದೆ ಹೇಳಿ, ಅವರ ಋಣ ನಮ್ಮ ಕುಟುಂಬದ ಮೇಲೆ ಇದೆ ಅದನ್ನು ತೀರಸಲಿಕ್ಕೆ ಸಾಧ್ಯವಿಲ್ಲ ಎಂದರು. ಮೊನ್ನೆ ನಡೆದ ಅಂದರೆ ಸುಮಾರು ನಾಲ್ಕು ತಿಂಗಳ ಹಿಂದೆ ಮೇ ತಿಂಗಳಲ್ಲಿ ನಡೆದ 2023ರ ವಿಧಾನಸಭಾ ಚುನಾವಣೆಯಲ್ಲಿಯೂ ಸಹ ಕೆಂಚಿಕೊಪ್ಪ ಗ್ರಾಮದ ಮತದಾರರು ಅತಿ ಹೆಚ್ಚು ಮತವನ್ನು ಕೊಟ್ಟು ನನ್ನನ್ನು ಗೆಲ್ಲಿಸಿದ್ದಾರೆ. ಅವರ ಋಣವನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿದರು.
ಕೆಂಚಿಕೊಪ್ಪ ಗ್ರಾಮಸ್ಥರಿಂದ ಶಾಸಕ ಡಿ ಜಿ ಶಾಂತನಗೌಡ್ರು ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಮಾಜಿ ಶಾಸಕ ಡಿ ಬಿ ಗಂಗಪ್ಪನವರು ಸನ್ಮಾನ ಹಾಗೂ ಅಭಿನಂದನ ಸಮಾರಂಭದ ಕುರಿತು ಮಾತನಾಡಿ ಅವಳಿ ತಾಲೂಕಿನ ಮತದಾರರು ತಮಗೆ 17 ಸಾವಿರ ಅಂತರದಿಂದ ಮತ ಚಲಾಯಿಸಿ ನಿಮ್ಮನ್ನ ಗೆಲ್ಲಿಸಿದ್ದಾರೆ, ಮತದಾರರಿಗೆ ಯಾವುದೇ ರೀತಿ ನೋವಾಗದೆ ತಾವು ಜವಾಬ್ದಾರಿಯಿಂದ ಕೆಲಸವನ್ನು ಮಾಡಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು. ಗ್ರಾಮದ ಕುಂದು ಕೊರತೆಗಳ ಬಗ್ಗೆ ಮನವಿ ಪತ್ರ ಗ್ರಾಮಸ್ಥರಿಂದ ಶಾಸಕರಿಗೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಇ ಈಶ್ವರಪ್ಪ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ತಾಲೂಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ ಜಿ ವಿಶ್ವನಾಥ್, ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಶಿವಪ್ಪ, ಉಮಾಪತಿ, ಎಚ್ ಬಿ ಶಿವಯೋಗಿ, ಡಾ. ಈಶ್ವರ ನಾಯ್ಕ, ಆರ್ ನಾಗಪ್ಪ, ಆಶಾ ಕೆ ಮಾದನಹಳ್ಳಿ ರುದ್ರೇಶ್, ಕೆಂಚಿಕೊಪ್ಪ ಕಾಂಗ್ರೆಸ್ ಪಕ್ಷದ ಮುಖಂಡರು, ಹಿರಿಯರು, ಕಾರ್ಯಕರ್ತರು ಹಾಗೂ ಮಹಿಳೆಯರು, ಊರಿನ ಗ್ರಾಮಸ್ಥರು ಸಹ ಇದ್ದರು.