ನ್ಯಾಮತಿ ತಾಲೂಕು ಸೋಗಿಲು ತಾಂಡ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಮಹಾ ಗೌರಿ ಗಣಪತಿ ವಿಸರ್ಜನಾ ಕಾರ್ಯ ಶನಿವಾರ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ 11 ಗಂಟೆಯಿಂದ ಪ್ರಸಾದ ವ್ಯವಸ್ಥೆ ಪ್ರಾರಂಭಗೊಂಡು ಮಧ್ಯಾಹ್ನ ಎರಡು ಗಂಟೆವರೆಗೆ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಮಧ್ಯಾಹ್ನ 2 ಗಂಟೆಯಿಂದ ಗಣಪತಿಯ ಮೂರ್ತಿಗೆ ಪೂಜೆ ಸಲ್ಲಿಸಿ ವಿಸರ್ಜನೆ ಮೆರವಣಿಗೆ ಆರಂಭವಾಯಿತು ಮರಿಯಮ್ಮ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ವಿವಿಧ ಕೇರಿಗಳಲ್ಲಿ ತೆರಳುವ ಸಂದರ್ಭದಲ್ಲಿ ಮುತ್ತೈದೆಯರು ರಂಗೋಲಿಯನ್ನು ಹಾಕಿ ಹಣ್ಣು ಕಾಯಿ ನೈವೇದ್ಯ ಮಾಡಿ ಪ್ರಸಾದದೊಂದಿಗೆ ಪೂಜಾ ಕೈಂ ಕೈರ್ಯ ನೆರವೇರಿತು. ಗಣಪತಿಯ ವಿಸರ್ಜನೆ ಸಂದರ್ಭದಲ್ಲಿ ಡಿಜಿ ಹಾಡಿಗೆ ಯುವಕರು ಮತ್ತುಯುವತಿಯರು ಪುರುಷರು ಮಹಿಳೆಯರು ಹಿರಿಯರು ಕಿರಿಯರು ಎನ್ನದೆ ಬೇದ ಭಾವವಿಲ್ಲದೆ ಕುಣಿದು ಕುಪ್ಪಳಿಸಿದರು. ಗಣಪತಿಯ ವಿಸರ್ಜನೆಯ ಸಂದರ್ಭದಲ್ಲಿ ಯಾವುದು ಅಹಿತಕರ ಘಟನೆ ನಡೆಯಬಾರದೆಂದು ಮುಂಜಾಗ್ರತ ಕ್ರಮವಾಗಿ ಗ್ರಾಮದ ಪ್ರತಿಯೊಂದು ಮನೆಯ ಯುವಕರು ಸೈನಿಕರಂತೆ ರಕ್ಷಣೆ ಮಾಡಿದ್ದು ವಿಶೇಷವಾಗಿತ್ತು. ರಾತ್ರಿ 10 ರಿಂದ 11 ಗಂಟೆಯವರೆಗೆ ಒಂದು ಗಂಟೆಯ ಕಾಲ ವಿಸರ್ಜನೆಯ ಸಮಯದಲ್ಲಿ ಪಟಾಕಿ ಉತ್ಸವ ನಡೆಯಿತು. ಗ್ರಾಮದ ದೇವಸ್ಥಾನದ ಊರು ಬಾವಿಯಲ್ಲಿ ಗಣೇಶನಿಗೆ ಮಹಾಮಂಗಲ ಮಹಾ ಆರುತಿಯೊಂದಿಗೆ ವಿಸರ್ಜಿಸಲಾಯಿತು ಎಂದು ಗ್ರಾಮದ ಮುಖಂಡರಾದ ಶಂಕರ್ ನಾಯ್ಕ ಮತ್ತು ತತ್ಯ ನಾಯ್ಕ ತಿಳಿಸಿದರು. ಶಿವಮೊಗ್ಗ ದಾವಣಗೆರೆ ಚನ್ನಗಿರಿ ಹೊನ್ನಾಳಿ ನ್ಯಾಮತಿ ಭಾಗದಿಂದ ಬಂದಂತ ಸಾವಿರಾರು ಭಕ್ತರು ಹಾಗೂ ಊರಿನ ಗ್ರಾಮಸ್ಥರು ಸಹ ಪಾಲ್ಗೊಂಡಿದ್ದರು.