ಹೊನ್ನಾಳಿ: ಅ 8 ತಾಲೂಕು ರಾಜ್ಯ ಹೆದ್ದಾರಿ ಗೊಲ್ಲರಹಳ್ಳಿ ಇಂದ ಬೇಲೆಮಲ್ಲೂರು ಆಂಜನೇಯ ದೇವಸ್ಥಾನದವರೆಗೆ ಲೋಕೋಪಯೋಗಿ ಇಲಾಖೆಯ 50% 54% ಯೋಜನೆ ಅಡಿಯ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜಾ ಕಾರ್ಯ ನೆರವೇರಿಸಿವುದರ ಮುಖೇನ ಶಾಸಕ ಡಿ ಜಿ ಶಾಂತನಗೌಡ್ರು ಚಾಲನೆ ನೀಡಿದರು. ಕಾಮಗಾರಿಗೆ ಚಾಲನೆ ನೀಡಿ ಶಾಸಕ ಡಿಜಿ ಶಾಂತನಗೌಡ್ರು ನಂತರ ಮಾತನಾಡಿ 4 ಕೋಟಿ ರೂ ವೆಚ್ಚದ 2.95 ಕಿಲೋಮೀಟರ್ ಉದ್ದ, 5.5 ಮೀಟರ್ ಅಗಲದ ಸಿಸಿ ರಸ್ತೆಗೆ ಇಂದು ಚಾಲನೆ ಕೊಡಲಾಗಿದೆ. ಈ ಭಾಗದ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಅನುಸಾರವಾಗಿ ಗೊಲ್ಲರಹರಳ್ಳಿ ಇಂದ ಬೇಲೆಮಲ್ಲೂರು ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಸಿಸಿ ರಸ್ತೆ ಕಾಮಗಾರಿ ಎರಡು ಮೂರು ತಿಂಗಳಲ್ಲಿ ಪೂರ್ಣಗೊಳ್ಳುವುದು ಎಂದು ತಿಳಿಸಿದರು.
ಈ ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಇಂಜಿನಿಯರ್ ಶಶಿಧರ್, ಮುಖಂಡರುಗಳಾದ ಶಿವಾನಂದಪ್ಪ, ನರಸಪ್ಪ, ಮಧು ಗೌಡ, ಅಣ್ಣಪ್ಪ, ಜಯಪ್ಪ, ಎಂಪಿ ಸಿದ್ದಪ್ಪ, ನಾಗರಾಜಪ್ಪ ಗೌಡ್ರು, ಕರಿಬಸಪ್ಪ, ಗುತ್ತಿಗೆದಾರ ಸೋಮಣ್ಣ,ಇನ್ನು ಮುಂತಾದವರು ಸಹ ಇದ್ದರು.