ನ್ಯಾಮಂತಿ ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಇಂದು 2324ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು 20 ಅಂಶ ಕಾರ್ಯಕ್ರಮ ಸೇರಿದಂತೆ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆ ಗೋವಿಂದರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ತ್ರೈಮಾಸಿಕ ಕೆ ಡಿ ಪಿ ಸಭೆಯ ಅಧ್ಯಕ್ಷತೆಯನ್ನು ಉದ್ದೇಶಿಸಿ ಮಾತನಾಡಿದವರು ಕಂದಾಯ ಇಲಾಖೆಯಲ್ಲಿ ಬರುವಂತಹ ಹಲವಾರು ಸರ್ವೇ ನಂಬರ್ 67, 12, 15ರ ,ಬರುವಂತಹ 57, 53 ಅಡಿಯಲ್ಲಿ ಅಕ್ರಮ-ಸಕ್ರಮದ ಯೋಜನೆಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿಯನ್ನು ಪಡೆದು ಎಷ್ಟು ಜನ ಅರ್ಜಿಯನ್ನು ಸಲ್ಲಿಸಿದ್ದಾರೆ. ವಿಲೇವಾರಿ ಎಷ್ಟು ಆಗಿವೆ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು.
ತದನಂತರ ಮುಸ್ಯನಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ನಾಯ್ಕ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ತಾಲೂಕ್ ಸರ್ವೆ ಮಂಜುನಾಥ್ ರವರು ನಮ್ಮ ಭಾಗದಲ್ಲಿ ಫೋನಿನ ಕರೆಗೆ ಯಾವುದೇ ರೀತಿಯ ರೈತರಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ಮಾಡುತ್ತಿಲ್ಲ ಅವರನ್ನ ಬೇರೆ ಕಡೆ ವರ್ಗಾವಣೆ ಮಾಡಬೇಕೆಂದು ಶಾಸಕರಲ್ಲಿ ಮೌಕಿಕವಾಗಿ ಮನವಿ ಮಾಡಿಕೊಂಡು ನಮ್ಮ ಮುಸ್ಯೇನಾಳ ಗ್ರಾಮ ಸರ್ವೆ ನಂಬರ್ 19 ರಲ್ಲಿ 130 ಎಕರೆ ಜಮೀನಿದ್ದು ಅದರಲ್ಲಿ ಫಾರೆಸ್ಟ್ ದನ ಕರುಗಳಿಗೆ ಮುಪ್ಪತ್ತು ಇದ್ದು 50 53 ಅರ್ಜಿಯನ್ನು ಸಲ್ಲಿಸಿದ್ದಾರೆ. ನಮ್ಮ ಗ್ರಾಮವು ಕಂದಾಯ ಗ್ರಾಮ ಆಗಬೇಕಾಗಿದೆ ಹಾಗಾಗಿ ತಾಲೂಕು ಮಟ್ಟದ ಅಧಿಕಾರಿಗಳು ನಮ್ಮ ಗ್ರಾಮದ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿಕೊಂಡು ಈ ಹಿಂದೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ನಮ್ಮ ಊರಿನ ಸಮಸ್ಯೆಯ ಬಗ್ಗೆ ತಿಳಿಸಿದ್ದರು ಸಹ ಇಲ್ಲಿವರೆಗೆ ಯಾವುದೇ ರೀತಿಯ ಸಮಸ್ಯೆಗಳಿಗೆ ಸ್ಪಂದಿಸಿಲ್ಲ, ಹಾಗಾಗಿ ನಮ್ಮ ಗ್ರಾಮವನ್ನು ಕಂದಾಯ ಗ್ರಾಮ ಮಾಡಬೇಕೆಂದು ನಮ್ಮ ಗ್ರಾಮದ ಜನರು ಒತ್ತಾಯವಾಗಿದೆ ಎಂದು ಹೇಳುತ್ತಾ ಕೃಷಿ ಇಲಾಖೆಗೆ ಸಂಬಂಧಪಟ್ಟಹಾಗೆ ಔಷಧಿ ಕ್ಯಾನ ಮತ್ತು ಟಾರ್ಪಲ್ ಒಂದುವರೆ ಸಾವಿರ ಇಲಾಖೆಗೆ ಬಂದಿದ್ದರೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ಅಧಿಕಾರಿಗಳ ಮೇಲೆ ಹರಿಆಯದರು. ಬೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿ ಈ ವರ್ಷ ಬರಗಾಲ ಇರುವುದರಿಂದ ರಾತ್ರಿ 2 ಗಂಟೆ ಹಗಲು 3ಗಂಟೆ ವಿದ್ಯುತ್ ಪಂಪ್ಸೆಟ್ ಹೊಂದಿದ ರೈತರಿಗೆ ಕೊಡಲಾಗುವುದು ಎಂದು ಇಂಜಿನಿಯರ್ ತಿಳಿಸಿದರು. ಅಬಕಾರಿ ಇಲಾಖೆ , ಆರೋಗ್ಯ ಇಲಾಖೆ ಸಹಕಾರಿ ಇಲಾಖೆ, ಅರಣ್ಯ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆಗೆ ಸೇರಿ ಇನ್ನೂ ಹಲವಾರು ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಇಂದಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಸಾರ್ವಜನಿಕರಿಗೆ ಕುಂದು ಕೊರತೆಗಳ ಬಗ್ಗೆ ತಕ್ಷಣ ಸ್ಪಂದಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೆಡಿಪಿ ಸಭೆಯಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಕುಂತಲಾ ಬಾಯಿ, ನಾಗೇಶ್ ನಾಯ್ಕ ,ಪ್ರವೀಣ್ ಗಂಜಿನಳ್ಳಿ ನಟರಾಜಪ್ಪ, ನೇತ್ರಾವತಿ, ಪಿಡಿಒ ಸೋಮಶೇಖರ್, ಅಬಕಾರಿ ಇಲಾಖೆಯ ಅಧಿಕಾರಿ ಚೇತನ್, ಕೃಷಿ ಅಧಿಕಾರಿ ಮಂಜುನಾಥ್, ಇನ್ನು ಮುಂತಾದ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.