ನ್ಯಾಮತಿ: ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಸಮುದಾಯ ಆರೋಗ್ಯ ಕೇಂದ್ರ ನ್ಯಾಮತಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರು ಕಣ್ಣಿನ ತಪಾಸಣೆಗೆ ಬಿಪಿ, ಶುಗರ್, ರಕ್ತಪರೀಕ್ಷೆ ಮಾಡಿಸಿ ಕಣ್ಣಿನ ಪೆÇರೆ ಬಂದಂತವರಿಗೆ ಶಸ್ತ್ರಚಿಕಿತ್ಸೆಗೆ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರಿಗೆ ವರದಿ ಮಾಡಲಾಯಿತು ಎಂದು ತಾಲೂಕು ವೈದ್ಯಾಧಿಕಾರಿ ತಿಳಿಸಿದರು. ಕಣ್ಣಿನ ಪರೀಕ್ಷೆಗೆ ಬಂದಂತ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತು ಪರೀಕ್ಷೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಕಣ್ಣಿನ ನೇತ್ರ ಸಹಾಯಕ ತಿಮ್ಮರಾಜು, ಶ್ರೀನಿವಾಸ್ , ಡಾ// ಮೆಣಸಿನಕಾಯಿ, ಡಾ// ತೇಜಸ್ವಿ ಡಾ//ರಘುಕುಮಾರ್, ತಾಲೂಕು ನೌಕರ ಸಂಘದ ಅಧ್ಯಕ್ಷರಾದ ನಿಂಗಪ್ಪ ಎಂ ಬಿ, ಆಶಾ ಕಾರ್ಯಕರ್ತೆಯರು ಪೆÇಲೀಸ್ ಇಲಾಖೆ ಸಿಬ್ಬಂದಿ ವರ್ಗ, ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗದವರು ಸಹ ಇದ್ದರು.