ದಾವಣಗೆರೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ದಾವಣಗೆರೆ ತಾಲ್ಲೂಕಿನ ಕುಂದುವಾಡ ಕೆ.ಹೆಚ್.ಕಾಲೋನಿಯಲ್ಲಿನ ಶ್ರೀಬಸವೇಶ್ವರ ಕಾನ್ವೆಂಟ್ ಹಿ.ಪ್ರಾ.ಶಾಲೆ, ಮಾನ್ಯತೆಯನ್ನು ರದ್ದುಪಡಿಸಿ ಆದೇಶಿಸಿದ್ದಾರೆ. ಶಾಲೆಯ ಮಾನ್ಯತೆ ರದ್ದುಪಡಿಸಿರುವುದರಿಂದ ಸಾರ್ವಜನಿಕರು ಮತ್ತು ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲು ಮಾಡಬಾರದೆಂದು ದಾವಣಗೆರೆ ದಕ್ಷಿಣ ವಲಯ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ;ಪುಷ್ಪಲತಾ ತಿಳಿಸಿದ್ದಾರೆ.