ನ್ಯಾಮತಿ: ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದಂತಹ ಹಳೆಯ ವಿದ್ಯಾರ್ಥಿಗಳು ಸಂಘಟಿತರಾಗಿ ಶಾಲೆಯ ಅಭಿವೃದ್ದಿಗೆ ಗಮನಹರಿಸಲು ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಯನ್ನು ವೀಕ್ಷಿಸಿ ಚರ್ಚಿಸಿದರು.
ಯಾವುದೇ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಹಂತದಿAದ ಅಭ್ಯಾಸ ಮಾಡಿದ ಶಾಲೆಗಳ ಅಭಿವೃದ್ದಿಗೆ ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಿದರೆ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬಹುದು ಎಂದು ಹಳೆಯ ವಿದ್ಯಾರ್ಥಿ ನಿವೃತ್ತ ಎಂಜಿನಿಯರ್ ಮಾದನಬಾವಿ ರುದ್ರಪ್ಪಗೌಡ ಮನವಿ ಮಾಡಿದರು.
ಪಟ್ಟಣದ ಮುನಿಸಿಪಲ್ ಹೈಸ್ಕೂಲ್, ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಸ್ತುತ ಕೆಪಿಎಸ್ ಶಾಲೆಯಾಗಿ ಪರಿವರ್ತನೆ ಹೊಂದಿರುವ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಕೆಲವರು ಉನ್ನತ ಹುದ್ದೆಗಳಲ್ಲಿ ಇದ್ದು ನಿವೃತ್ತರಾಗಿದ್ದಾರೆ. ಇನ್ನು ಕೆಲವರು ವಿದೇಶದಲ್ಲಿ ಕರ್ತವ್ಯ ನಿರ್ವಹಿಸಿ ಮರಳಿ ಬಂದಿರುವವರು ತಾವು ಕಲಿತ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಂಘಟಿತರಾಗಿದ್ದೇವೆ. ನÀ.೪ರಂದು ಮಧ್ಯಾಹ್ನ ೧೨ ಗಂಟೆಗೆ ಕೆಪಿಎಸ್ ಶಾಲೆಯಲ್ಲಿ ಸಭೆಯನ್ನು ಕರೆದು ಪದಾಧಿಕಾರಿಗಳ ಆಯ್ಕೆ, ರೂಪುರೇಷೆಗಳನ್ನು ಮಾಡಲಾಗುವುದು ಎಂದರು.
ಸಭೆಯಲ್ಲಿ ಚುನಾªಣಾ ಆಯೋಗದ ನಿವೃತ್ತ ಕಾರ್ಯದರ್ಶಿ ಸುರಹೊನ್ನೆ ಬಿ.ಚನ್ನಬಸಪ್ಪ, ನಿವೃತ್ತ ಪ್ರಾಂಶುಪಾಲ ಬಣಗಾರ ಕಾಂತಪ್ಪ, ಉಪಪ್ರಾಂಶುಪಾಲೆ ಎಸ್.ಆರ್.ಗಿರಿಜಮ್ಮ, ಹಿರಿಯ ಸಹಶಿಕ್ಷಕ ಸಿದ್ದಪ್ಪ ಜಿಗಣಪ್ಪನವರ, ನಿವೃತ್ತ ಶಿಕ್ಷಕ ಎಸ್.ಜಿ.ಬಸವರಾಜಪ್ಪ, ಹಾಲೇಶಪ್ಪ, ಸೊಂಡೂರು ಮಹೇಶ್ವರಪ್ಪ,ಎಚ್.ಮಹೇಶ್ವರಪ್ಪ, ಪ್ರಶಾಂತ ರಾಯ್ಕರ್, ಹಿಂದಿ ಶಿಕ್ಷಕ ಎಂ.ಬಿ.ಶಿವಯೋಗಿ, ಸಹಶಿಕ್ಷಕ ಎಂ. ಮಲ್ಲಿಕಾರ್ಜುನ ಮಾತನಾಡಿದರು.